ಬಿಜೆಪಿ ಸರ್ಕಾರದಲ್ಲೇ ಸುಹಾಸ್ ಶೆಟ್ಟಿ ಮೇಲೆ ರೌಡಿಶೀಟರ್ ಓಪನ್​.. ದಾಖಲೆ ಬಿಡುಗಡೆ ಮಾಡಿ “ಕೇಸರಿ”ಗೆ ‘ಕೈ’ ಕೌಂಟರ್​​!

ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ಮುಂದುವರಿದ್ದು, ಸದ್ಯ ಕರಾವಳಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಹತ್ಯೆಯಾದ ಸುಹಾಸ್​ ಶೆಟ್ಟಿ ಮೇಲೆ 4ಕ್ಕಿಂತ ಹೆಚ್ಚು ಕ್ರಿಮಿನಲ್​ ಕೇಸ್​ಗಳಿದ್ದು, ರೌಡಿಶೀಟರ್​ ಓಪನ್​ ಮಾಡಲಾಗಿತ್ತು. ಹತ್ಯೆಯಾದ ಬಳಿಕ ಸುಹಾಸ್​ ಶೆಟ್ಟಿ ಹಿಂದೂ ಕಾರ್ಯಕರ್ತ ಎಂಬ ವಿಚಾರವನ್ನೂ ಬಿಜೆಪಿ ನಾಯಕರು ಮುನ್ನಲೆಗೆ ತಂದಿದ್ದರು.

ಸುಹಾಸ್​ ಹತ್ಯೆ ಪ್ರಸ್ತಾಪಿಸಿ ಕಾಂಗ್ರೆಸ್​ ಸರ್ಕಾರದ ವಿರುದ್ದ ಬಿಜೆಪಿ ನಾಯಕರು ಮುಗಿ ಬಿದ್ದಿದ್ದರು. ಇದೀಗ ಸುಹಾಸ್ ಶೆಟ್ಟಿ ರೌಡಿಶೀಟರ್​ ಓಪನ್​ ಮಾಡಿದ್ದರ ಬಗ್ಗೆ ಕಾಂಗ್ರೆಸ್ ನಾಯಕರು ಇಂಚಿಂಚೂ ಮಾಹಿತಿ ರಿವೀಲ್​ ಮಾಡಿದ್ದಾರೆ. 2020ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಹಾಸ್ ಶೆಟ್ಟಿ ವಿರುದ್ದ ರೌಡಿಶೀಟರ್ ಓಪನ್ ಮಾಡಿರುವ ಆದೇಶ ಪ್ರತಿಯನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ : OMC ಅಕ್ರಮ ಗಣಿಗಾರಿಕೆ ಪ್ರಕರಣ – ಶಾಸಕ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ!

 

 

Btv Kannada
Author: Btv Kannada

Read More