ಕಲಬುರಗಿ : ಮಹಿಳೆಯೊಬ್ಬರನ್ನು ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಬಂದರವಾಡ ಗ್ರಾಮದಲ್ಲಿ ನಡೆದಿದೆ. 40 ವರ್ಷದ ಲಕ್ಕಮ್ಮ ದೊಡ್ಡಮನಿ ಕೊಲೆಯಾದ ದುದೈವಿ.
ಲಕ್ಕಮ್ಮಳ ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದು, ಮನೆ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಸಂತೋಷ್ (35), ಮಂಜುನಾಥ (25) ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಈ ಪ್ರಕರಣ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ರಮೇಶ್ ಅರವಿಂದ್ ನಟನೆಯ “ದೈಜಿ” ಚಿತ್ರತಂಡಕ್ಕೆ ದಿಗಂತ್ ಸೇರ್ಪಡೆ!

Author: Btv Kannada
Post Views: 169