ಬೆಂಗಳೂರು : ಖಡಕ್ IPS ಅಧಿಕಾರಿ ಅಲೋಕ್ ಕುಮಾರ್ ಅವರ ಮಕ್ಕಳ ಮೇಲೆ ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳು ಕಿರಿಕ್ ಮಾಡಿದ್ದಾರೆ. ಮೇ 3 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ RCB – CSK ಐಪಿಎಲ್ ಪಂದ್ಯದಲ್ಲಿ ಸೀಟ್ ವಿಚಾರಕ್ಕೆ ತೆರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ದಂಪತಿ ಗಲಾಟೆ ಮಾಡಿದ್ದಾರೆ.
RCB – CSK ಐಪಿಎಲ್ ಪಂದ್ಯದಲ್ಲಿ ಡ್ರೈಮಂಡ್ ಬ್ಲಾಕ್ನಲ್ಲಿ ಸೀಟ್ ವಿಚಾರಕ್ಕೆ ADGP ಅಲೋಕ್ ಕುಮಾರ್ ಪುತ್ರ ಹಾಗೂ ಪುತ್ರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಅವರಿಗೆ ಬೆದರಿಕೆ ಹಾಕಿ, ಅಸಭ್ಯವಾಗಿ ವರ್ತಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಅಲೋಕ್ ಕುಮಾರ್ ಅವರ ಮಗಳನ್ನು ಮುಟ್ಟಿ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಅಲೋಕ್ ಕುಮಾರ್ ಅವರ ಪತ್ನಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದು, FIR ದಾಖಲಾಗಿದೆ.
ಅಲೋಕ್ ಕುಮಾರ್ ಪತ್ನಿ ಕೊಟ್ಟ ದೂರಿನಲ್ಲಿ ಏನಿದೆ?
ನನ್ನ ಮಗ ಮತ್ತು ಮಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್.ಸಿ.ಬಿ & ಚೆನ್ನೈ ತಂಡಗಳ ನಡುವಿನ ಐಪಿಎಲ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದರು. ಪಂದ್ಯ ವೀಕ್ಷಣೆ ಮಾಡುತ್ತಿದ್ದ ಗ್ಯಾಲರಿಯಲ್ಲಿ (ಡ್ರೈಮಂಡ್ ಬ್ಲಾಕ್) ನಲ್ಲಿ ರಾತ್ರಿ ಸುಮಾರು 9.40ರ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ವಿನಃ ಕಾರಣ ಜೋರಾಗಿ ಕಿರುಚಾಡಿ, ಬೆದರಿಕೆ ಹಾಕಿ ನನ್ನ ಮಕ್ಕಳಿಗೆ ತೊಂದರೆ ಕೊಟ್ಟಿರುತ್ತಾರೆ. ಬಳಿಕ ನನ್ನ ಮಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿರುತ್ತಾರೆ. ಇದಲ್ಲದೇ ದಂಪತಿಗಳಿಬ್ಬರು ಅವಾಚ್ಯ ಪದಗಳಿಂದ ಬೈದು ನನ್ನ ಮಗಳನ್ನು ನಿಂದಿಸಿರುತ್ತಾರೆ, ಇದೆಲ್ಲ ಘಟನೆಯನ್ನು ನನ್ನ ಮಗನು ತನ್ನ ಮೊಬೈಲ್ ಫೋನಿನಲ್ಲಿ ವಿಡಿಯೋ ಚಿತ್ರೀಕರಿಸಿರುತ್ತಾನೆ. ಆದ್ದರಿಂದ ವಿನಃ ಕಾರಣ ನನ್ನ ಮಕ್ಕಳಿಗೆ ತೊಂದರೆ ಕೊಟ್ಟಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಬಿ ರಿಪೋರ್ಟ್ ಹಾಕಲು 6 ಲಕ್ಷಕ್ಕೆ ಡಿಮ್ಯಾಂಡ್ – ಲೋಕಾ ಬಲೆಗೆ ಬಿದ್ದ PI ಶಿವಾಜಿ ರಾವ್ & PSI ಶಿವಾನಂದ ಜಿ!
