ಬೆಂಗಳೂರು : ಜೀನಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಜೀನಿ ಮಾಲೀಕ ದಿಲೀಪ್ ಕುಮಾರ್ ವಿರುದ್ಧ ಕಳ್ಳಂಬೆಳ್ಳ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ ಕಳ್ಳಂಬೆಳ್ಳ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ, ದಿಲೀಪ್ನಿಂದ 10 ಲಕ್ಷ ಲಂಚ ಪಡೆದು ಆತನನ್ನು ಅರೆಸ್ಟ್ ಮಾಡದೆ ಸೇಫ್ ಮಾಡಿದ್ದಾರೆ. ಈ ಬಗ್ಗೆ ಬಿಟಿವಿ ನಿರಂತರವಾಗಿ ವರದಿ ಮಾಡಿತ್ತು.

ಇದೀಗ ಬಿಟಿವಿ ಬಿಗ್ ಇಂಪ್ಯಾಕ್ಟ್ ರೇಪಿಸ್ಟ್ ದಿಲೀಪ್ಗೆ ಸಪೋರ್ಟ್ ಮಾಡಿದ್ದ ಇನ್ಸ್ಪೆಕ್ಟರ್ ರಾಘವೇಂದ್ರ ಅವರನ್ನು ಎತ್ತಂಗಡಿ ಮಾಡಲಾಗಿದೆ. ಕಳ್ಳಂಬೆಳ್ಳ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಈ ಸ್ಥಳಕ್ಕೆ ಶ್ರೀನಿವಾಸ್ ಡಿಜಿ ಅವರನ್ನು ನಿಯೋಜನೆಗೊಳಿಸಿ ಆದೇಶ ಹೊರಡಿಸಿದೆ.

ದಿಲೀಪ್ ಕುಮಾರ್ ವಿರುದ್ಧ 164 ಸ್ಟೇಟ್ಮೆಂಟ್ ಆದ್ರೂ ಆತನನ್ನು ಇನ್ಸ್ಪೆಕ್ಟರ್ ರಾಘವೇಂದ್ರ ಬಂಧಿಸಿಲ್ಲ. ‘ಜೀನಿ’ ದಿಲೀಪ್ ಇನ್ಸ್ಪೆಕ್ಟರ್ ರಾಘವೇಂದ್ರಗೆ ಲಂಚ ಕೊಟ್ಟು ತಲೆಮರಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಸಂತ್ರಸ್ತೆ ಗಂಡನಿಗೆ ಫೋನ್ ಮೂಲಕ ಬೆದರಿಕೆ ಹಾಕಿದ್ದಾನೆ. ಅತ್ಯಾಚಾರ ಕೇಸಲ್ಲಿ ದಿಲೀಪ್ಗೆ ಕನಿಷ್ಠ ಅಂದ್ರೂ 4-5 ವರ್ಷ ಜೈಲು ಫಿಕ್ಸ್. ಈಗ ಸಾಕ್ಷಿ ನಾಶ ಹಾಗೂ ಬೆದರಿಕೆ ಹಾಕಿದ್ದಕ್ಕೆ ರೇಪಿಸ್ಟ್ ದಿಲೀಪ್ಗೆ ಮತ್ತೆ 5 ವರ್ಷ ಜೈಲೇ ಗತಿ.

ಏನಿದು ಪ್ರಕರಣ : ಏಪ್ರಿಲ್ 19 ರಂದು ಮಹಿಳೆಯನ್ನು ಸ್ವಲ್ಪ ಕೆಲಸ ಇದೆ ಎಂದು ಜೀನಿ ಕಂಪನಿಯ ಶೆಡ್‌ಗೆ ಕರೆದುಕೊಂಡು ಹೋದ ತಕ್ಷಣ ಆಕೆಯ ಕೈಯನ್ನು ಹಿಡಿದು ಎಳೆದಾಡಿ ಅತ್ಯಾಚಾರಕ್ಕೆ ಪ್ರಯತ್ನಿಸಿ, ನನಗೆ ಸಹಕರಿಸು ನಿನ್ನನ್ನು ರಾಣಿ ರೀತಿ ನೋಡಿಕೊಳ್ಳುತ್ತೇನೆ ಎಂದು ಆಮಿಷ ಒಡ್ಡಿದ್ದಾನೆ. ನಂತರ ಯುವತಿಯು ಅಲ್ಲಿಂದ ತಪ್ಪಿಸಿಕೊಂಡು ಹೋಗಿ ತಮ್ಮ ಗಂಡನ ಜತೆಗೆ ಬಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಲೈಂಗಿಕ ದೌರ್ಜನ್ಯ ಮತ್ತು ಜಾತಿ ನಿಂದನೆ ಆರೋಪದ ಮೇಲೆ ಜೀನಿ ಮಾಲೀಕ ದಿಲೀಪ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕರ್ನಾಟಕದಿಂದ ದೈವಿಕ ಪ್ರೀತಿ.. ನೀವು ಯಾವ ತೀರ್ಪು ನೀಡಿದ್ರೂ ಸ್ವೀಕರಿಸುತ್ತೇನೆ – ಕನ್ನಡಿಗರ ಆಕ್ರೋಶಕ್ಕೆ ಥಂಡಾ ಹೊಡೆದ ಸೋನು ನಿಗಮ್!







