ಸಿಎಂ ಸಿದ್ದರಾಮಯ್ಯನ ಕೊಂದ್ರೆ ಹಿಂದೂಗಳಿಗೆ ನೆಮ್ಮದಿ – ಇನ್ಸ್ಟಾದಲ್ಲಿ ಪೋಸ್ಟ್ ಹಾಕಿದ್ದ ಹೋಂ ಗಾರ್ಡ್​ ಅರೆಸ್ಟ್!

ಉಡುಪಿ : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಬಳಿಕ ದಕ್ಷಿಣ ಕನ್ನಡದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಕೊಲೆಯ ನಂತರ ಸೋಶಿಯಲ್ ಮೀಡಿಯಾದಲ್ಲಿ ಪ್ರತೀಕಾರದ ಬೆದರಿಕೆಗಳು ಹರಿದಾಡುತ್ತಿದ್ದು, ಈ ಮಧ್ಯೆ ಸಿಎಂ ಸಿದ್ದರಾಮಯ್ಯನವರ ಬಗ್ಗೆ ಹೋಂ ಗಾರ್ಡ್​ ಅವಹೇಳನಕಾರಿ ಕಮೆಂಟ್ ಮಾಡಿದ್ದಾನೆ.

ಬೆಂಗಳೂರಿನ ಹೋಂ ಗಾರ್ಡ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂಪತ್ ಸಾಲಿಯಾನ್​ ಎಂಬಾತ ಸಿಎಂ ಸಿದ್ದರಾಮಯ್ಯನನ್ನು ಕೊಂದ್ರೆ ಹಿಂದೂಗಳಿಗೆ ನೆಮ್ಮದಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಿದ್ದಾನೆ. ಈ ಸಂಬಂಧ ಸದ್ಯ ಕಾರ್ಕಳ ಪೊಲೀಸರು ಹೋಂ ಗಾರ್ಡ್ ಸಂಪತ್​ನನ್ನು ಬಂಧಿಸಿದ್ದಾರೆ.

ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಏಟಿಗೆ ಎದುರೇಟು, ಪ್ರತೀಕಾರದ ಸಂದೇಶಗಳು ಹರಿದಾಡುತ್ತಿವೆ.  ವಿಹೆಚ್​ಪಿ ಮತ್ತು ಬಜರಂಗದಳ ಮುಖಂಡರಿಗೆ ಜೀವ ಬೆದರಿಕೆ ಹಾಕಲಾಗಿದೆ. ಮುಂದಿನ ಟಾರ್ಗೆಟ್ ವಿಶ್ವ ಹಿಂದೂ ಪರಿಷತ್​ ಶರಣ್​ ಪಂಪ್​ವೆಲ್​ ಮತ್ತು ಬಜರಂಗದಳ ಮುಖಂಡ ಭರತ್​ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಲಾಗಿದೆ.

ಇದನ್ನೂ ಓದಿ : ಸತ್ತೇಗಾಲ ಡ್ಯಾಂನಿಂದ ರಾಮನಗರಕ್ಕೆ ಕುಡಿಯುವ ನೀರು.. ಯೋಜನೆಗೆ ಅಡಿಗಲ್ಲು ಹಾಕಿದ ಡಿಸಿಎಂ ಡಿಕೆಶಿ!

Btv Kannada
Author: Btv Kannada

Read More