ಬೆಂಗಳೂರು : ಬಸವೇಶ್ವರ ನಗರ ನಮಿತಾ ಕೊಲೆ ಪ್ರಕರಣ ಸಂಬಂಧ ಇದೀಗ ಗಂಡ ಲೋಕೇಶ್ ಕುಮಾರ್ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಸವೇಶ್ವರ ನಗರ ಪೊಲೀಸರು ಲೋಕೇಶ್ ಕುಮಾರ್ನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಏ.24 ರಂದು ಮಗು ನೋಡಿಕೊಳ್ಳುವ ವಿಚಾರಕ್ಕೆ ದಂಪತಿ ಮಧ್ಯೆ ಜಗಳ ನಡೆದು ಗಂಡ ಕತ್ತು ಹಿಸುಕಿ ಪತ್ನಿ ನಮಿತಾಳನ್ನು ಕೊಲೆ ಮಾಡಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಲೋಕೇಶ್ ಕುಮಾರ್ ಸತ್ಯ ಬಾಯ್ಬಿಟ್ಟಿದ್ದಾನೆ. ಉತ್ತರಪ್ರದೇಶದ ತಾಯಿ ಮನೆಗೆ ಮಗಳನ್ನು ಕಳಿಸುವುದಾಗಿ ಹೆಂಡ್ತಿ ಹೇಳಿದ್ದಳು. ಈ ವೇಳೆ ಮಗಳನ್ನು ಕಳಿಸಬೇಡ ಅಂತ ದಂಪತಿಗಳ ನಡುವೆ ಜಗಳವಾಗಿದ್ದು, ಕೋಪದಲ್ಲಿ ಗಂಡ, ಹೆಂಡ್ತಿಗೆ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಲೋಕೇಶ್ ಉತ್ತರ ಪ್ರದೇಶದ ನಮಿತಾಳನ್ನು ಪ್ರೀತಿಸಿ ಮದುವೆಯಾಗಿದ್ದ. ನಮಿತಾ ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಬಸವೇಶ್ವರ ನಗರ ಪೊಲೀಸರು
ಕೊಲೆ, ವರದಕ್ಷಿಣೆ ಅಡಿ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ : ನಟ ಆದಿತ್ಯ ಬರ್ತ್ಡೇಗೆ ಹಾಡಿನ ಉಡುಗೊರೆ ನೀಡಿದ ‘ಟೆರರ್’ ಚಿತ್ರತಂಡ!
