ಹೆಡ್​​ ಕಾನ್ಸ್​ಟೇಬಲ್​ನಿಂದಲೇ ಮೀಟರ್ ಬಡ್ಡಿ ದಂಧೆ – ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಯತ್ನ!

ಹಾಸನ : ಪೊಲೀಸ್ ಸಿಬ್ಬಂದಿಯೊಬ್ಬರ ಮೀಟರ್ ಬಡ್ಡಿ ದಂಧೆ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ನಡೆದಿದೆ.

ಬಾಳ್ಳುಪೇಟೆಯ ಮೊಹಮ್ಮದ್ ತನ್ವೀರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಹಾಸನ ಎಸ್​ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್ಸ್​ಟೇಬಲ್​ ಅರುಣ್​ ವಿರುದ್ಧ ಮೀಟರ್ ಬಡ್ಡಿ ದಂಧೆ ಆರೋಪ ಕೇಳಿಬಂದಿದೆ.

ಮೊಹಮ್ಮದ್ ತನ್ವೀರ್​​ 2 ವರ್ಷದ ಹಿಂದೆ ಕೋಳಿ ಅಂಗಡಿ ಮಾಡಲು ಹೆಡ್ ಕಾನ್ಸ್​ಟೇಬಲ್​ ಅರುಣ್​​ ಬಳಿ ಸಾಲ ಪಡೆದಿದ್ದರು. 80 ಸಾವಿರ ರೂ ಹಣಕ್ಕೆ ವಾರಕ್ಕೆ 7,800 ರೂ. ಬಡ್ಡಿ ವಸೂಲಿ ಮಾಡಲಾಗುತ್ತಿತ್ತು. ವಾರಕ್ಕೆ 7800 ರೂಪಾಯಿಯಂತೆ ಪ್ರತಿ ತಿಂಗಳು ಆತ 28 ಸಾವಿರ ಹಣವನ್ನು ಬಡ್ಡಿ ರೀತಿ ಅರುಣ್​ಗೆ ಕಟ್ಟುತ್ತಿದ್ದ. ಅಷ್ಟೇ ಅಲ್ಲದೇ ಬೇರೆ ಬೇರೆಯವರ ಬಳಿ ಸುಮಾರು 5 ಲಕ್ಷ ಹಣವನ್ನು ತನ್ವೀರ್ ಸಾಲವಾಗಿ ಪಡೆದಿದ್ದ. ದುಡಿದ ಹಣವನೆಲ್ಲಾ ಬಡ್ಡಿಗೆ ಕಟ್ಟುತ್ತಿದ್ದ. ಇದರಿಂದ ಬೇಸತ್ತು ತನ್ವೀರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇನ್ನು ವಿಷ ಸೇವಿಸಿ ಅಸ್ವಸ್ಥನಾಗಿದ್ದ ತನ್ವೀರ್​ನನ್ನು ಹಾಸನದ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಮೀಟರ್​ ಬಡ್ಡಿ ಆರೋಪದ ಮೇಲೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : ವಕೀಲ ಜಗದೀಶ್ ಸಾವಿಗೆ ಟ್ಟಿಸ್ಟ್ – ನೈಸ್ ರಸ್ತೆಯಲ್ಲಿ ಲಾರಿ ಚಾಲಕನ ಜೊತೆ ಫೈಟ್​​ .. ಪೊಲೀಸ್ ತನಿಖೆಯಲ್ಲಿ ರಹಸ್ಯ ಬಯಲು!

Btv Kannada
Author: Btv Kannada

Read More