ಬೈಕ್​ನಲ್ಲಿ ಹಿಂಬಾಲಿಸಿ ಯುವತಿ ಹಿಂಭಾಗಕ್ಕೆ ಟಚ್ – ರೋಡ್ ರೋಮಿಯೋ MBA ಪದವೀಧರ ಶ್ರೀಕಾಂತ್ ಅರೆಸ್ಟ್!

ಬೆಂಗಳೂರು : ನಗರದ ಮಾರತ್ತಹಳ್ಳಿಯಲ್ಲಿ ಯುವತಿಯ ಜೊತೆಗೆ ಅಸಭ್ಯ ವರ್ತನೆ ತೋರಿದ್ದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದೇವರಬೀಸನಹಳ್ಳಿ ನಿವಾಸಿಯಾಗಿರೋ ಶ್ರೀಕಾಂತ್ ಬಂಧಿತ ಕಾಮುಕ.

ಕಳೆದ ಏ.30ರಂದು ರಾತ್ರಿ 11:30 ಗಂಟೆ ಸುಮಾರಿಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಕೆಲಸ ಮುಗಿಸಿ ಇಕೋ ಸ್ಪೇಸ್‌ನ ಮುಖ್ಯದ್ವಾರದ ಬಳಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಕಾಮುಕ ಬೈಕ್​ನಲ್ಲಿ ಹಿಂಬಾಲಿಸಿ‌ ಯುವತಿಯ ಹಿಂಭಾಗಕ್ಕೆ ಹೊಡೆದಿದ್ದ.

ಇದೀಗ ಸಿಸಿಟಿವಿ, ಯುವಕನ ಟಿಶರ್ಟ್‌ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣ ಮಾರತ್ ಹ​ಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡರ ಮಗನೇ ಅಲ್ಲ – HD ರೇವಣ್ಣ ಕಿಡಿ!

Btv Kannada
Author: Btv Kannada

Read More