ಬೈಕ್‌ಗೆ ಲಾರಿ ಡಿಕ್ಕಿ – ಪೊಲೀಸ್ ಕಾನ್ಸ್‌ಟೇಬಲ್‌ ಸ್ಥಳದಲ್ಲೇ ಸಾವು!

ಹಾಸನ : ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಕಾನ್ಸ್‌ಟೇಬಲ್‌ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಕೆಂಚನಹಳ್ಳಿ ಬಳಿ ನಡೆದಿದೆ. 38 ವರ್ಷದ ಪ್ರಕಾಶ್ ಮೃತಪಟ್ಟ ಪೊಲೀಸ್ ಕಾನ್ಸ್‌ಟೇಬಲ್‌.

11ನೇ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಪೊಲೀಸ್ ಕಾನ್ಸ್‌ಟೇಬಲ್‌ ಪ್ರಕಾಶ್ ಅವರು ಹಾಸನ ನಗರದಿಂದ ಸರ್ಕಾರಿ ದ್ವಿಚಕ್ರ ವಾಹನದಲ್ಲಿ ಗಾಡೇನಹಳ್ಳಿಗೆ ಕರ್ತವ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ : ಕನ್ನಡ ಚಿತ್ರಗಳ ವಿರೋಧಿಯಾದ ಮಲ್ಟಿಫ್ಲೆಕ್ಸ್ – ಮಾಲ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡ ‘ನಾನ್ ಪೋಲಿ’ ಚಿತ್ರತಂಡ!

Btv Kannada
Author: Btv Kannada

Read More

Read More