ಕನ್ನಡ ಸಿನಿಮಾ ರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಆ ಸಿನಿಮಾಗಳ ಸಾಲಿಗೆ ಈಗ ಹೊಸ ಸೇರ್ಪಡೆ ‘ನಾನ್ ಪೋಲಿ’ ಚಿತ್ರ. ಹೊಸ ತಂಡದ ಹೊಸ ಪ್ರಯತ್ನದ ಸಿನಿಮಾ ಇದಾಗಿದೆ. ಶುಕ್ರವಾರ ತೆರೆಕಂಡ ನಾನ್ ಪೋಲಿ ಸಿನಿಮಾ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ.
ಆದರೆ ಮಲ್ಟಿಫ್ಲೆಕ್ಸ್ಗಳಲ್ಲಿ ಮಾತ್ರ ಸರಿಯಾಗಿ ಶೋಗಳನ್ನು ಕಾಣ್ತಿಲ್ಲ. ಮಾಗಡಿ ರಸ್ತೆಯಲ್ಲಿರೋ ಜಿಟಿ ಮಾಲ್ನಲ್ಲಿ ಸಿನಿಮಾವನ್ನು ಡಿಸ್ಪ್ಲೆ ಮಾಡದ ಕಾರಣ ಇದೀಗ ಚಿತ್ರತಂಡ ಮಾಲ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಸಿನಿಮಾ ಪ್ರಚಾರಕ್ಕೆ ಪಿವಿಆರ್ ವಿರೋಧ ವ್ಯಕ್ತಪಡಿಸುತ್ತಿದೆ. ಇದು ಕೇವಲ ನಾನ್ ಪೋಲಿ ಚಿತ್ರತಂಡದ ನೋವಲ್ಲ. ಇತ್ತೀಚೆಗೆ ತೆರೆಕಂಡ ಯುದ್ದಕಾಂಡ ಚಿತ್ರಕ್ಕೂ ಪಿವಿಆರ್ ತಂಡ ಅದೇ ರೀತಿಯ ತಕರಾರು ಎತ್ತಿದ್ದು ನೆಟ್ ವರ್ಕ್ ಇಶ್ಯೂ ಅನ್ನೋ ಕಾನ್ಸೆಪ್ಟ್ ಮೂಲಕ ಜಾರಿ ಕೊಳ್ಳೋ ಪ್ರಯತ್ನವನ್ನು ಮಾಡ್ತಿದೆ.
‘ನಾನ್ ಪೋಲಿ’ ಚಿತ್ರದಲ್ಲಿ ಸ್ನೇಹ, ಪ್ರೀತಿ ಹಾಗೂ ತಾಯಿ ಸೆಂಟಿಮೆಂಟ್ ಸುತ್ತ ನಡೆಯುವ ಕಥಾಹಂದರವಿದೆ. ಇಬ್ಬರು ಸ್ನೇಹಿತರ ಕಥೆ, ಮಧ್ಯಮ ವರ್ಗ ಹಾಗೂ ಶ್ರೀಮಂತ ಕುಟುಂಬಕ್ಕೆ ಸೇರಿದ ಸ್ನೇಹಿತರ ನಡುವಿನ ಪ್ರೇಮಕಥೆಯೂ ಚಿತ್ರದಲ್ಲಿದೆ.
ಇನ್ನು ನಾನ್ ಪೋಲಿ ಚಿತ್ರಕ್ಕೆ ಯಶವಂತ್ ಆಕ್ಷನ್ ಕಟ್ ಹೇಳೋದರ ಮೂಲಕ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಹರೀಶ್, ದಿಶಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ದೇವರಾಜ್ ಖಳ ನಟನಾಗಿ ಕಾಣಿಸಿಕೊಂಡಿದ್ದಾರೆ. ಚೇತನ್ ಸಂಗೀತ ನಿರ್ದೇಶನ, ಕೀರ್ತಿವರ್ಧನ್ ಛಾಯಾಚಿತ್ರಗ್ರಹಣವಿದೆ.
ಇದನ್ನೂ ಓದಿ : ಒಟಿಟಿಗೆ ಲಗ್ಗೆ ಇಟ್ಟ ಕೆರೆಬೇಟೆ ಸಿನಿಮಾ – ಸ್ಟ್ರೀಮಿಂಗ್ ಎಲ್ಲಿ?
