ದೆಹಲಿ : ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ ಅವರು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆನ ಭೇಟಿ ಮಾಡಿ ಮೇ.28ರಂದು ಚಾಮನರಾಜನಗರದಲ್ಲಿ ನಡೆಯುವ ಉಪ್ಪಾರ ಜಯಂತಿಗೆ ಅವರನ್ನು ಆಹ್ವಾನಿಸಿದ್ದಾರೆ.
ಬೇರೆ ಬೇರೆ ಜಾತಿಯವರು ಉಪ್ಪಾರ ಜಾತಿಯ ಹೆಸರಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ಶಾಸಕ ಪುಟ್ಟರಂಗ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಸಾಕಷ್ಟು ಉಳಿದ ಜಾತಿಗಳಿವೆ, ನಾವು ಪ್ರವರ್ಗ 1ರಲ್ಲಿದ್ದೇವೆ, ಪ್ರವರ್ಗದಲ್ಲಿ 94 ಜಾತಿಗಳಿವೆ. ಯಾರು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಮಾಹಿತಿ ಇಲ್ಲ. ಸರ್ಕಾರದ ಜಾತಿ ಗಣತಿ ಅನ್ನುವುದಕ್ಕಿಂತ ಅದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿಯಾಗಿದೆ. ಜಾತಿಗಣತಿಯಲ್ಲಿ ಹೀಗೆ ಆಗಿದೆ, ಹಾಗೆ ಅನ್ನುವುದಕ್ಕಿಂತ ತಳಮಟ್ಟದಲ್ಲಿ ಇರುವವರಿಗೆ ಆದ್ಯತೆ ನೀಡಬೇಕು ಎಂದಿದ್ದಾರೆ.
ಜಾತಿಗಣತಿಯಲ್ಲಿ ಜನಸಂಖ್ಯೆ ಹೆಚ್ಚು ಕಡಿಮೆ ಆಗಿರಬಹುದು, ಸರ್ಕಾರ ಜಾತಿಗಣತಿಯನ್ನ ಒಪ್ಪಿಕೊಳ್ಳಬೇಕು. ಕೇಂದ್ರ ಸರ್ಕಾರ ಜಾತಿಗಣತಿ ಮಾಡಲ್ಲ ಅಂದವರು ಇದೀಗ ಅವರೇ ಜಾತಿಗಣತಿ ಮಾಡ್ತಾ ಇದಾರೆ. ಅವರು ಎಷ್ಟರಮಟ್ಟಿಗೆ ಜಾತಿಗಣತಿ ಮಾಡ್ತಾರೆ ನೋಡೋಣ, ಪ್ರವರ್ಗದಲ್ಲಿ ಎಷ್ಟು ಜಾತಿಗಳಿವೆ ಅನ್ನೋದಕ್ಕಿಂತ ಎಷ್ಟು ಮೀಸಲಾತಿ ಸಿಕ್ಕಿದೆ ಅನ್ನೋದು ಮುಖ್ಯ, ಜನಸಂಖ್ಯೆ ಹೆಚ್ಚಾದ ಬಳಿಕ ಅದಕ್ಕೆ ತಕ್ಕಂತೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಶಾಸಕ ಪುಟ್ಟರಂಗ ಶೆಟ್ಟಿ ಹೇಳಿದರು.
ಇದನ್ನೂ ಓದಿ : ಭ್ರಷ್ಟಾಚಾರದ ಕುರಿತ ಕಥೆಗೆ ಟೈಟಲ್ ಫಿಕ್ಸ್ – ದ್ವಿಭಾಷೆಯಲ್ಲಿ ಬರ್ತಿದೆ “ಶೇಷ 2016”!
