ಬೆಂಗಳೂರು : ನಕಲಿ ದಾಖಲಾತಿ ಮೂಲಕ ಇ -ಸ್ವತ್ತು ಖಾತೆ ಮಾಡಿ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆ ಮಾಡಿದ್ದ ನರಸೀಪುರ ಪಿಡಿಓ ಉಮಾಶಂಕರ್ ಬಂಧನದ ಭೀತಿಯಲ್ಲಿ ತಲೆ ಮರೆಸಿಕೊಂಡಿದ್ದಾನೆ.
ಸಿಇಓ ಸೂಚನೆಯಂತೆ ನೆಲಮಂಗಲ ಗ್ರಾಮಾಂತರ ಹಾಗೂ ದಾಬಸ್ಪೇಟೆ ಪೊಲೀಸ್ ಠಾಣೆಗಳಲ್ಲಿ 2 ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ಸಾಬೀತಾದ್ರೆ ಪಿಡಿಓ ಉಮಾಶಂಕರ್ಗೆ 7 ವರ್ಷ ಜೈಲು ಫಿಕ್ಸ್ ಆಗಿದೆ. FIR ದಾಖಲಾಗುವ ಮುನ್ನವೇ ಪಿಡಿಓ ಉಮಾಶಂಕರ್ ಬಂಧನ ಮಾಡದಂತೆ 482 ಅಡಿಯಲ್ಲಿ ಜಾಮೀನು ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದಾನೆ.
ಈ ಹಿಂದೆ ಸೋಲದೇವನಹಳ್ಳಿ ಗ್ರಾಮ ಪಂಚಾಯತಿಯಲ್ಲಿ PDO ಆಗಿದ್ದ ವೇಳೆ ಅಕ್ರಮದ ಹಿನ್ನೆಲೆ ಉಮಾಶಂಕರ್ ವಿರುದ್ಧ FIR ದಾಖಲಾಗಿತ್ತು. ಇದೀಗ ನಕಲಿ ದಾಖಲಾತಿ ಅಪ್ಲೋಡ್ ಮಾಡಿ ಇ-ಸ್ವತ್ತು ಖಾತೆ ಮಾಡಿದ್ದ ಉಮಾಶಂಕರ್ ಇಲಾಖೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡಿ ಕೋಟಿಗಟ್ಟಲೆ ನಷ್ಟ ಉಂಟು ಮಾಡಿದ್ದಾನೆ.
ಇದನ್ನೂ ಓದಿ : ಕ್ಷಮೆ ಕೇಳದೇ ಮತ್ತೆ ಸೋನು ನಿಗಮ್ ಉದ್ಧಟತನ – ಸ್ಯಾಂಡಲ್ವುಡ್ನಿಂದ ಬ್ಯಾನ್ ಮಾಡುವಂತೆ ಆಗ್ರಹ!

Author: Btv Kannada
Post Views: 239