ಬೆಂಗಳೂರು : ಆರ್ಸಿಬಿ ಹಾಗೂ ಚೆನ್ನೈ ನಡುವಿನ IPL ಪಂದ್ಯಕ್ಕೆ ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ V/S ಆರ್ಸಿಬಿ ಹೈ ವೋಲ್ಟೇಜ್ ಪಂದ್ಯದ ವೇಳೆ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ IPL ಟಿಕೆಟ್ನ್ನು ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದ ಚರಣ್ ರಾಜ್, ಹರೀಶ್, ವಿನಯ್, ವೆಂಕಟ ಸಾಯಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರಿಂದ 1,200 ಮುಖ ಬೆಲೆಯ 12 ಟಿಕೆಟ್ಗಳು, 4 ಮೊಬೈಲ್ ಹಾಗೂ 1 ಲಕ್ಷ ನಗದು ಹಣವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕ್ಷಮೆ ಕೇಳದೇ ಮತ್ತೆ ಸೋನು ನಿಗಮ್ ಉದ್ಧಟತನ – ಸ್ಯಾಂಡಲ್ವುಡ್ನಿಂದ ಬ್ಯಾನ್ ಮಾಡುವಂತೆ ಆಗ್ರಹ!

Author: Btv Kannada
Post Views: 284