ಡಾಲಿ ಧನಂಜಯ್‌ ನಿರ್ಮಾಣದ ‘ವಿದ್ಯಾಪತಿ’ ಒಟಿಟಿಗೆ ಬರಲು ರೆಡಿ.. ಸ್ಟ್ರೀಮಿಂಗ್ ಎಲ್ಲಿ?‌

ಡಾಲಿ ಧನಂಜಯ್ ನಿರ್ಮಿಸಿರುವ ‘ವಿದ್ಯಾಪತಿ’ ಸಿನಿಮಾ ಏಪ್ರಿಲ್‌ 10ರಂದು ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಡಾಲಿ ಅವರ ಗೆಳೆಯ ನಾಗಭೂಷಣ್ ಹೀರೋ ಆಗಿ ನಟಿಸಿದ್ದರು. ಉಪಾಧ್ಯಕ್ಷ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಮಲೈಕಾ ವಸುಪಾಲ್ ನಾಯಕಿ ನಟಿಸಿದ್ದು, ಡಾಲಿ ಧನಂಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಚಿತ್ರ ಒಟಿಟಿಗೆ ಎಂಟ್ರಿ ಕೊಟ್ಟಿದೆ.

ಇಶಾಂ ಹಾಗೂ ಹಸೀಂ ಖಾನ್ ಅವರು ನಿರ್ದೇಶನದಲ್ಲಿ ಮೂಡಿಬಂದಿದ್ದ ವಿದ್ಯಾಪತಿ ಸಿನಿಮಾ ಅಮೇಜಾನ್‌ ಪ್ರೈಮ್​ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಥಿಯೇಟರ್​ನಲ್ಲಿ ಮಿಸ್‌ ಮಾಡಿಕೊಂಡವರು ಮನೆ ಮಂದಿ ಕುಳಿತು ಫ್ಯಾಮಿಲಿ ಎಂಟರ್‌ ಟೈನರ್‌ ವಿದ್ಯಾಪತಿ ಚಿತ್ರ ನೋಡಬಹುದು. ಧನಂಜಯ್ ಒಡೆತನದ ‘ಡಾಲಿ ಪಿಕ್ಚರ್ಸ್‌’ ಮೂಲಕ ನಿರ್ಮಾಣ ಮಾಡಿರುವ ನಾಲ್ಕನೇ ಚಿತ್ರ ಇದಾಗಿದೆ.

ನಾಗಭೂಷಣ್-ಮಲೈಕಾ ಜೊತೆಗೆ ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ‘ವಿದ್ಯಾಪತಿ’ ಚಿತ್ರಕ್ಕೆ ಕಥೆ ಬರೆದು, ಸಂಕಲನವನ್ನೂ ಇಶಾಂ ಹಾಗೂ ಹಸೀಂ ಖಾನ್ ಅವರು ಮಾಡಿದ್ದಾರೆ. ಲವಿತ್ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ನಿರ್ದೇಶನ, ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸುಜಿತ್ ವೆಂಕಟರಾಮಯ್ಯ ಅವರು ಸಾಹಿತ್ಯ ಬರೆದಿದ್ದಾರೆ. ಅರ್ಜುನ್ ಮಾಸ್ಟರ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ : ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ – ನಾಲಿಗೆ ಹರಿಬಿಟ್ಟ ಗಾಯಕ ಸೋನು ನಿಗಮ್ ವಿರುದ್ಧ FIR!

Btv Kannada
Author: Btv Kannada

Read More