SSLCಯಲ್ಲಿ 90% ಅಂಕ ಗಳಿಸಿದ ಪುತ್ರಿ ಅನನ್ಯಾಗೆ ಭಾವನಾತ್ಮಕವಾಗಿ ವಿಶ್ ಮಾಡ್ದ ಪ್ರಹ್ಲಾದ್ ಜೋಶಿ!

ಬೆಂಗಳೂರು : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿ ಅನನ್ಯಾ SSLC ಪರೀಕ್ಷೆಯಲ್ಲಿ 90% ಅಂಕ ಗಳಿಸುವ ಮೂಲಕ ಉತ್ತೀರ್ಣರಾಗಿದ್ದಾಳೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಮಗಳಿಗೆ ಭಾವನಾತ್ಮಕವಾಗಿ ವಿಶ್ ಮಾಡಿದ್ದಾರೆ.
‘ನನ್ನ ನೆಚ್ಚಿನ ಮಗಳ ಅನನ್ಯಾ SSLC ಒಳಗ 90% ಮಾಡ್ಯಾಳ…ಅಕಿ ಹಂಗ ಸಿರಿಯಸ್ ಆಗಿ ಭಾಳ ಟೇನ್ಶನ್ ತೊಗೊಂಡ ಓದಿದೋಕಿ ಏನ ಅಲ್ಲಾ, ಆದ್ರ SSLC ಅಂತ ಅಂದಮ್ಯಾಲೆ ಅಕಿ ಕಿಂತಾ ಜಾಸ್ತಿ ನಮಗ ಕಾಳಜಿ ಇದ್ದ ಇರ್ತದ. ಅದರಾಗ ನಮ್ಮ ಮನೆಯವರ ಅಂತೂ ’ನೀವೇನ ಇವತ್ತ ಹುಬ್ಬಳ್ಳಿ ಒಳಗ ಇದ್ದರ ನಾಳೆ ದಿಲ್ಲಿ ಒಳಗ ಇರ್ತೀರಿ…ಮಗಳದ SSLC ಈ ವರ್ಷ… ಇವತ್ತಿನ ಕಾಂಪಿಟೇಶನ್ ಕಾಲದಾಗ ಎಷ್ಟ ಮಾರ್ಕ್ಸ ತೊಗೊಂಡರು ಕಡಮಿನ’ ಅಂತ ಭಾಳ ಟೆನ್ಶನ್ ತೊಗೊಂಡಿದ್ದರು. ಹಂಗ ಅಂತ ನಾವ ಯಾರೂ ಅಕಿ ಮ್ಯಾಲೆ ಏನ ಪ್ರೆಶರ್ ಹಾಕಿದ್ದಿಲ್ಲಾ.
ತನ್ನ ರೂಟಿನ್ ಸಂಗೀತ, ಆಟ ಅದರೊಳಗ ಅಭ್ಯಾಸನೂ ಮಾಡಿ 90% ಮಾಡಿದ್ದ ನಮ್ಮ ಮನ್ಯಾಗ ಎಲ್ಲಾರಿಗೂ ಭಾಳ ಖುಶಿ ಆಗೇದ. ಇದ ನಮಗೇಲ್ಲಾ ಹೆಮ್ಮೆ ಪಡೊ ವಿಷಯನ. ಮುಂದ ಅಕಿ ಏನ ಕಲಿಬೇಕ ಅಂತಾಳ ಅದನ್ನ ಕಲಸಲಿಕ್ಕೆ ನಾವ ರೆಡಿ ಇದ್ದೇವಿ. ಅಕಿ ಮುಂದಿನ ವಿದ್ಯಾಭ್ಯಾಸ ಹಿಂಗ ಸಾಗಲಿ ಅಂತ ಅಕಿಗೆ ಶುಭಕೋರುತ್ತಾ ಅಭಿನಂದನೆ ಹೇಳ್ತೇನಿ.. We are proud of you Ananya, and wish you all the best’ ಎಂದು ಬರೆದುಕೊಂಡಿದ್ದಾರೆ.

 

ಇದನ್ನೂ ಓದಿ : ಒಕ್ಕಲಿಗ ಸಮುದಾಯದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ – ನಿರ್ಮಾಪಕ ಉಮಾಪತಿ ಗೌಡ ಖಡಕ್ ಎಚ್ಚರಿಕೆ!

Btv Kannada
Author: Btv Kannada

Read More