ರೇಣುಕಾಸ್ವಾಮಿ ಕೇಸಲ್ಲಿ ನಟ ದರ್ಶನ್​ ಗೆಳತಿ ಪವಿತ್ರಾ ಗೌಡಗೆ ಬಿಗ್ ರಿಲೀಫ್ – ಹೊರ ರಾಜ್ಯಗಳಿಗೆ ತೆರಳಲು ಕೋರ್ಟ್​ ಗ್ರೀನ್​ಸಿಗ್ನಲ್​!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗುರುವ ನಟ ದರ್ಶನ್​ ಗೆಳತಿ ಪವಿತ್ರಾ ಗೌಡ ಅವರು ಕರ್ನಾಟಕ ಹೊರತು ಪಡಿಸಿ ಹೊರ ರಾಜ್ಯಕ್ಕೆ ತೆರಳಲು ಕೋರ್ಟ್​ ಅನುಮತಿ ನೀಡಿದೆ.

ತಮ್ಮ ವ್ಯವಹಾರ ಸಂಬಂಧ 4 ರಾಜ್ಯಗಳಿಗೆ ತೆರಳಲು ಪವಿತ್ರಾ ಗೌಡ ಅವರು 57ನೇ ಸೆಷನ್ಸ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಕೋಲ್ಕತಾ, ಗುಜರಾತ್​ನ ಸೂರತ್, ಮಹಾರಾಷ್ಟ್ರದ ಮುಂಬೈ ಹಾಗೂ ಮಂತ್ರಾಲಯಕ್ಕೆ ತೆರಳಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಪವಿತ್ರ ಗೌಡ ಅವರು ಸಲ್ಲಿಸಿದ್ದ ಮನವಿಯ ಅರ್ಜಿಯನ್ನು 57ನೇ ಸಿಸಿಹೆಚ್ ಕೋರ್ಟ್ ಪುರಸ್ಕರಿಸಿ ಮೇ 5 ರಿಂದ 19 ರವರೆಗೆ ಅನುಮತಿ ನೀಡಿದೆ. ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಂದಿನ‌ ವಿಚಾರಣೆ ಮೇ 20ಕ್ಕೆ ಕೋರ್ಟ್​ ಮುಂದೂಡಿಕೆ ಮಾಡಿದೆ.

ಇದನ್ನೂ ಓದಿ : ರಕ್ತಸಿಕ್ತ ಸ್ಥಿತಿಯಲ್ಲಿ ಲಾಯರ್ ಜಗದೀಶ್ ಡೆಡ್​ ಬಾಡಿ – ನೈಸ್ ರೋಡಲ್ಲಿ ಅಪಘಾತ ಮಾಡಿ ಹತ್ಯೆ ಮಾಡಿರುವ ಸಾಧ್ಯತೆ!

Btv Kannada
Author: Btv Kannada

Read More