ಕೋಟಿ ಕೋಟಿ BDA ಅಕ್ರಮದ ದಾಖಲೆಗಳ ನಾಶಕ್ಕೆ ಯತ್ನ – ಸಾಮಾಜಿಕ ಕಾರ್ಯಕರ್ತ ಶರತ್ ಬಾಬು ಮನೆಗೆ ನುಗ್ಗಿ ಕಳ್ಳತನ!

ಬೆಂಗಳೂರು : ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (BDA)ನಲ್ಲಿ ಅಕ್ರಮಗಳು ಆಗಾಗ ಹೊರಬರುತ್ತಲೇ ಇರುತ್ತವೆ. ಇದೀಗ ಕೋಟಿ ಕೋಟಿ ಮೌಲ್ಯದ ಬಿಡಿಎ ಅಕ್ರಮದ ದಾಖಲೆಗಳನ್ನು ಕಳವಿಗೆ ಯತ್ನ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಸಾಮಾಜಿಕ ಕಾರ್ಯಕರ್ತ ಶರತ್ ಬಾಬು ಮನೆಗೆ ನುಗ್ಗಿ 350 ಕೋಟಿ ಬಿಡಿಎ ಅಕ್ರಮದ ದಾಖಲೆ ಕದ್ದೊಯ್ಯಲು ಯತ್ನಿಸಿದ್ದಾನೆ. BDA ಅಕ್ರಮದ ವಿರುದ್ದ ಹೋರಾಡುತ್ತಿರುವ ಶರತ್ ಬಾಬು ಅವರ ಜೆಪಿ ನಗರದ ನಿವಾಸದಲ್ಲಿ ದಾಖಲೆಗಳನ್ನು ಇಡಲಾಗಿತ್ತು. ಈ ದಾಖಲೆಗಳನ್ನು ಕಳವಿಗೆ ಯತ್ನಿಸಿದ್ದಾರೆ.

ದುಷ್ಕರ್ಮಿಗಳು ಶರತ್ ಬಾಬು ಮನೆಯ ಬೀರುವಿನಲ್ಲಿದ್ದ ಲ್ಯಾಪ್​ ಟಾಪ್ ಕದ್ದೊಯ್ದಿದ್ದಾರೆ. ಲ್ಯಾಪ್ ಟಾಪ್ ಕಳವು ಹಿಂದೆ ಬಿಡಿಎ ಅಧಿಕಾರಿಗಳ ಕೈವಾಡವಿದೆ ಅನ್ನೋ ಶಂಕೆ ವ್ಯಕ್ತವಾಗಿದ್ದು, ಇದೀಗ BDA ಅಧಿಕಾರಿಗಳ ಮೇಲೆ ಶರತ್ ಬಾಬು ಅನುಮಾನ ವ್ಯಕ್ತಪಡಿಸಿದ್ದಾರೆ.

ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿರುವ ಶರತ್ ಬಾಬು ಅವರು ಬಿಡಿಎ ಅಧಿಕಾರಿಗಳಾದ ಅಶೋಕ್, ಅಶೋಕ್ ಭಾಗಿ ಹೆಸರು ಉಲ್ಲೇಖಿಸಿದ್ದಾರೆ. ಅಶೋಕ್, ಅಶೋಕ್ ವಿರುದ್ದ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಶರತ್ ಬಾಬು ವಿರುದ್ದ FIR ದಾಖಲಿಸಿದ್ದ ಅಶೋಕ್, ಅಶೋಕ್​ ಅವರಿಂದ 350 ಕೋಟಿ ಬಿಡಿಎ ಅಕ್ರಮದ ದಾಖಲೆ ಕಳವಿಗೆ ಮಹಾ ಯತ್ನ ನಡೆದಿದೆ.

ಇದನ್ನೂ ಓದಿ : ಕ್ರಿಕೆಟ್‌ ಲೋಕದ ಕಿಂಗ್‌ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು?

Btv Kannada
Author: Btv Kannada

Read More