ಮಂಡ್ಯ : ತಂದೆಯ ಸಾವಿನ ನೋವಲ್ಲೂ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಉತ್ತೀರ್ಣನಾಗಿದ್ದಾನೆ. ಮಂಡ್ಯ ನಗರದ ಚಿಕ್ಕಮಂಡ್ಯ ಶಾಲೆಯ ವಿದ್ಯಾರ್ಥಿ ಬಾಲಾಜಿ ಎಂಬಾತನ ತಂದೆ ಏ.26 ರಂದು ಇಂಗ್ಲೀಷ್ ಪರೀಕ್ಷೆ ದಿನ ಮೃತಪಟ್ಟಿದ್ದರು. ತಂದೆ ಸಾವಿನ ನೋವಲ್ಲೂ ಬಾಲಾಜಿ ಪರೀಕ್ಷೆ ಬರೆದು ತಂದೆಯ ಅಂತ್ಯ ಸಂಸ್ಕಾರ ಮಾಡಿದ್ದ.
ಪರೀಕ್ಷೆಯ ದಿನದಂದು ತಂದೆಯ ಸಾವಿನ ದುಃಖದಲ್ಲಿದ್ದ ವಿದ್ಯಾರ್ಥಿಗೆ ಶಾಲೆಯ ಶಿಕ್ಷಕ ವೃಂದ ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬರೆಯಲು ಪ್ರೇರೆಪಿಸಿದ್ದರು. ಶಿಕ್ಷಕರ ಮನವೊಲಿಕೆಯಿಂದ ಪರೀಕ್ಷೆ ಬರೆದು ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದ. 625 ಕ್ಕೆ 332 ಅಂಕ ಪಡೆದು ಶೇ 53.12 % ನೊಂದಿಗೆ ವಿದ್ಯಾರ್ಥಿ ಉತ್ತೀರ್ಣನಾಗಿದ್ದು, ವಿದ್ಯಾರ್ಥಿ ಬಾಲಾಜಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಕ್ಕೆ ಶಾಲೆಯ ಶಿಕ್ಷಕರು ಸಂತಸಪಟ್ಟಿದ್ದಾರೆ.
ಇದನ್ನೂ ಓದಿ : ಪಲ್ಯ, ಸಾಂಬಾರ್ ವಿಚಾರಕ್ಕೆ ಜಗಳ – ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಲೆಗೈದ ಪಾಪಿ ಗಂಡ!
Author: Btv Kannada
Post Views: 388







