ಪಲ್ಯ‌, ಸಾಂಬಾರ್ ವಿಚಾರಕ್ಕೆ ಜಗಳ – ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಲೆಗೈದ ಪಾಪಿ ಗಂಡ!

ಬಾಗಲಕೋಟೆ : ಪಲ್ಯ‌, ಸಾಂಬಾರ್ ರುಚಿಯಾಗಿ ಮಾಡುವುದಿಲ್ಲ ಎಂಬ ನೆಪದಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ನಡೆದಿದೆ.

ಬೀರಪ್ಪ ಪೂಜಾರಿ ಕೊಲೆಗೈದ ಪಾಪಿ ಗಂಡ. 19 ವರ್ಷದ ಸಾಕ್ಷಿತಾ ಮೃತ ದುರ್ದೈವಿ. ಇಬ್ಬರದ್ದು ಅಂತರ್ಜಾತಿಯಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದ ಇವರು ಮನೆಬಿಟ್ಟು ಓಡಿ ಹೋಗಿದ್ದರು. ಆ ಬಳಿಕ ಹಿರಿಯರ ಸಮ್ಮತಿಯೊಂದಿಗೆ ಮದುವೆಯಾಗಿದ್ದರು.

ಮುಧೋಳ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಬೀರಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಮೃತ ಸಾಕ್ಷಿತಾ ಬೆಳಗಾವಿ ಜಿಲ್ಲೆಯ ವಡಗೋಲ ಗ್ರಾಮದ ನಿವಾಸಿಯಾಗಿದ್ದಳು.

ಇದನ್ನೂ ಓದಿ : ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಸೆಟ್ಟೇರಿತು ಶಿವಣ್ಣನ ‘A for ಆನಂದ್’ ಚಿತ್ರ!

Btv Kannada
Author: Btv Kannada

Read More