SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್‌ – ದೇವನಹಳ್ಳಿಯ ನೀಲಗಿರೀಶ್ವರ ವಿದ್ಯಾನಿಕೇತನ ಶಾಲೆಯ ಸಿ. ಭಾವನ ಸಂಭ್ರಮ!

ದೇವನಹಳ್ಳಿ : ರಾಜ್ಯದ SSLC ಪರೀಕ್ಷೆ-1ರಲ್ಲಿ ಈ ಬಾರಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈ ಬಾರಿ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕವನ್ನು ತೆಗೆದಿರೋದು ಮತ್ತೊಂದು ವಿಶೇಷವಾಗಿದೆ. ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಭಾವನಾ ಕೂಡ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

ಭಾವನಾ ನೀಲಗಿರೀಶ್ವರ ವಿದ್ಯಾನಿಕೇತನ ಪ್ರೌಢ ಶಾಲೆಯ ವಿದ್ಯಾರ್ಥಿನಿ ಆಗಿದ್ದು, ಇದೀಗ ಭಾವನಾ ಸಂಭ್ರಮ ಹಂಚಿಕೊಂಡಿದ್ದಾರೆ. ಸತತ ಪರಿಶ್ರಮದಿಂದ ದೊರತ ಜಯವಿದು. ಉತ್ತಮ ಕಲಿಕೆಗೆ ಪೋಷಕರು ಮತ್ತು ಶಾಲಾ ಆಡಳಿತ ಸಹಕರಿಸಿದ್ದಾರೆ. ಉತ್ತಮ ಫಲಿತಾಂಶ ಬರಲು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ IIFA ಪ್ರಶಸ್ತಿ ಪ್ರದಾನ ಸಮಾರಂಭ – ಡಿಸಿಎಂ ಡಿಕೆಶಿ ಜೊತೆ ಐಫಾ ಪ್ರತಿನಿಧಿಗಳ ಮೀಟಿಂಗ್!

Btv Kannada
Author: Btv Kannada

Read More