ಬೆಂಗಳೂರು : ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ರಾಜ್ಯಪಾಲರ ಹುದ್ದೆ ಸ್ವೀಕರಿಸಿದ ನಂತರ ಕನ್ನಡ ಕಲಿಯಲು ಪ್ರಾರಂಭಿಸಿದರು. ರಾಜ್ಯಪಾಲರಿಗೆ ಕನ್ನಡದ ಮೇಲಿರುವ ಪ್ರೀತಿಯಿಂದ ಕೆಲವೊಂದು ವಾಕ್ಯಗಳನ್ನು ಕನ್ನಡದಲ್ಲಿ ಸ್ಪಷ್ಟವಾಗಿ ಹೇಳ್ತಿದ್ದಾರೆ. ಈ ಬಗ್ಗೆ ಶಾಸಕ ಸುರೇಶ್ ಕುಮಾರ್ ಅವರು ತಮ್ಮ ಸೋಶಿಯಲ್ಲಿ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ.
ನಮ್ಮ ರಾಜ್ಯದ ಸನ್ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರಿಗೆ ಈಗ 77 ವರ್ಷ ವಯಸ್ಸು. ನಮ್ಮ ರಾಜ್ಯದ ರಾಜ್ಯಪಾಲರ ಹುದ್ದೆ ಸ್ವೀಕರಿಸಿದ ನಂತರ ಅವರು ತಾವೇ ತೀರ್ಮಾನ ಕೈ ಗೊಂಡು ಕನ್ನಡ ಕಲಿಯಲು ಪ್ರಾರಂಭಿಸಿದರು. ಇದೀಗ ತನ್ನ ಸಿಬ್ಬಂದಿಯೊಡನೆ “ಫೈಲ್ ತನ್ನಿ”.. “ಆ ಮನವಿ ತೆಗೆದುಕೊಂಡು ಬನ್ನಿ”.. ” ಅತಿಥಿಗಳಿಗೆ ಕಾಫಿ ಕೊಡಿ”.. ” ಈ ಕೆಲಸ ಮಾಡಿಕೊಂಡು ಬನ್ನಿ” ಇಷ್ಟು ವಾಕ್ಯಗಳನ್ನು ಹೇಳಲು ಪ್ರಾರಂಭಿಸಿದ್ದಾರೆ.

ಈ ಮಾಹಿತಿ ತಿಳಿದು ಖುಷಿಯಾಯಿತು, ರಾಜಭವನದ ಸಿಬ್ಬಂದಿಯ ಹೃದಯಗಳನ್ನೂ ಸನ್ಮಾನ್ಯರು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸನ್ಮಾನ್ಯ ರಾಜ್ಯಪಾಲರಿಗೆ ಅಭಿನಂದನೆಗಳು. ಇದು ಬೇರೆಯವರಿಗೂ ಉತ್ತಮ ಮೇಲ್ಪಂಕ್ತಿ ಎಂದು ಶಾಸಕ ಸುರೇಶ್ ಕುಮಾರ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಶಾಸಕ ಸ್ಥಾನಕ್ಕೆ ಶಿವಾನಂದ ಪಾಟೀಲ್ ರಾಜೀನಾಮೆ!
Author: Btv Kannada
Post Views: 310







