ಬೆಂಗಳೂರು : 2024-25ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಬೆಂಗಳೂರಿನ KSEAB ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ SSLC ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಮಧ್ಯಾಹ್ನ 12-30ರ ನಂತರ SSLC ಫಲಿತಾಂಶವನ್ನು ವಿಧ್ಯಾರ್ಥಿಗಳು https://karresults.nic.in ಜಾಲತಾಣದಲ್ಲಿ ವೀಕ್ಷಿಸಬಹುದಾಗಿದೆ.
ಈ ಬಾರಿ ಶೇ.66.14ರಷ್ಟು ಅಂದರೆ ಕಳೆದ ವರ್ಷಕ್ಕಿಂತ 8% ಫಲಿತಾಂಶ ಹೆಚ್ಚಾಗಿದೆ. ಈ ಬಾರಿಯೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಉಡುಪಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಂಡಿದೆ. ಹಾಗೇಯೆ ಮೂರನೇ ಸ್ಥಾನವನ್ನು ಉತ್ತರ ಕನ್ನಡ ಅಲಂಕರಿಸಿದೆ. 4ನೇ ಸ್ಥಾನ ಶಿವಮೊಗ್ಗ, 5ನೇ ಸ್ಥಾನ ಕೊಡಗು ಪಡೆದಿದ್ದರೆ, ಕಲಬುರಗಿಗೆ ಕೊನೇ ಸ್ಥಾನ (ಶೇ 42.43) ಪಡೆದಿದೆ.
625/625 ಅಂಕ ಪಡೆದ ಟಾಪ್ ವಿದ್ಯಾರ್ಥಿಗಳು
- ಅಖಿಲಾ ಅಹ್ಮದ್ ನದಾಪ್ – ವಿಜಯಪುರ
- ಭಾವನಾ – ಬೆಂಗಳೂರು ಗ್ರಾಮಾಂತರ
- ಧನಲಕ್ಷ್ಮಿ ಎಂ – ಬೆಂಗಳೂರು ಉತ್ತರ
- ಧನುಷ್ – ಮೈಸೂರು
- ಧೃತಿ – ಮಂಡ್ಯ
- ಜಾಹ್ನವಿ – ಬೆಂಗಳೂರು ದಕ್ಷಿಣ
- ಮಧುಸೂದನ್ ರಾಜು – ಬೆಂಗಳೂರು ಉತ್ತರ
- ಮೊಹಮ್ಮದ್ ಮಸ್ತೂರ್ ಆದಿಲ್ – ತುಮಕೂರು
- ಮೌಲ್ಯ ಡಿ ರಾಜ್ – ಚಿತ್ರದುರ್ಗ
- ನಮನ – ಶಿವಮೊಗ್ಗ
- ನಮಿತಾ – ಬೆಂಗಳೂರು ದಕ್ಷಿಣ
- ನಂದನ್ – ಚಿತ್ರದುರ್ಗ
- ನಿತ್ಯಾ ಎಂ ಕುಲಕರ್ಣಿ – ಶಿವಮೊಗ್ಗ
- ರಂಜಿತಾ – ಬೆಂಗಳೂರು ಗ್ರಾಮಾಂತರ
- ರೂಪ ಚನ್ನಗೌಡ ಪಾಟೀಲ್ – ಬೆಳಗಾವಿ
- ಶಹಿಷ್ಣು – ಶಿವಮೊಗ್ಗ
- ಶಗುಫ್ತಾ ಅಂಜುಮ್ – ಸಿರಸಿ
- ಸ್ವಸ್ತಿ ಕಾಮತ್ – ಉಡುಪಿ
- ತನ್ಯಾ – ಮೈಸೂರು
- ಉತ್ಸವ್ ಪಾಟೀಲ್ – ಹಾಸನ
- ಯಶವಂತ್ ರೆಡ್ಡಿ – ಮಧುಗಿರಿ
- ಯುಕ್ತಿ – ಬೆಂಗಳೂರು ದಕ್ಷಿಣ
ಇದನ್ನೂ ಓದಿ : SSLC ಫಲಿತಾಂಶ ಪ್ರಕಟ – ಈ ಬಾರಿಯೂ ಬಾಲಕಿಯರೇ ಮೇಲುಗೈ.. ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ!
