ಬೆಂಗಳೂರು : 2024-25ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಬೆಂಗಳೂರಿನ KSEAB ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ SSLC ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಈ ಬಾರಿ ಶೇ.66.1ರಷ್ಟು ಅಂದರೆ ಕಳೆದ ವರ್ಷಕ್ಕಿಂತ 8% ಫಲಿತಾಂಶ ಹೆಚ್ಚಾಗಿದೆ. ಈ ಬಾರಿಯೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಉಡುಪಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಂಡಿದೆ. ಹಾಗೇಯೆ ಮೂರನೇ ಸ್ಥಾನವನ್ನು ಉತ್ತರ ಕನ್ನಡ ಅಲಂಕರಿಸಿದೆ. 4ನೇ ಸ್ಥಾನ ಶಿವಮೊಗ್ಗ, 5ನೇ ಸ್ಥಾನ ಕೊಡಗು ಪಡೆದಿದ್ದರೆ, ಕಲಬುರಗಿಗೆ ಕೊನೇ ಸ್ಥಾನ (ಶೇ 42.43) ಪಡೆದಿದೆ.
ಇನ್ನು, ಈ ಬಾರಿ ಬರೋಬ್ಬರಿ 22 ಮಕ್ಕಳು 625ಕ್ಕೆ 625 ಅಂಕವನ್ನು ತೆಗೆದು ಗಮನ ಸೆಳೆದಿದ್ದಾರೆ. ಇದರ ಜೊತೆಗೆ 65 ವಿದ್ಯಾರ್ಥಿಗಳು 624 ಅಂಕ ಹಾಗೂ 108ವಿದ್ಯಾರ್ಥಿಗಳು 623, 189 ವಿದ್ಯಾರ್ಥಿಗಳು 622, 259 ವಿದ್ಯಾರ್ಥಿಗಳು 621 ಮತ್ತು 327 ವಿದ್ಯಾರ್ಥಿಗಳು 620 ಅಂಕಗಳನ್ನು ತೆಗೆದು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳು ರಿಸಲ್ಟ್ ನೋಡೋದು ಹೇಗೆ..?
- https://karresults.nic.in ವೆಬ್ಸೈಟ್ಗೆ ಭೇಟಿ ನೀಡಿ
- ಹೋಮ್ ಪೇಜ್ನಲ್ಲಿ ಕಾಣುವ Karnataka SSLC result 2025 ಮೇಲೆ ಕ್ಲಿಕ್ ಮಾಡಿ
- Submit the login credentials
- ಅಲ್ಲಿ ತೆರೆದುಕೊಳ್ಳವ ಸ್ಕ್ರೀನ್ ಮೇಲೆ ಹಾಲ್ ಟಿಕೆಟ್ ನಂಬರ್ ಹಾಕಿ ಸಬ್ಮಿಟ್ ಮಾಡಿ
- ಪರದೆ ಮೇಲೆ ನೀವು ಗಳಿಸಿದ ಮಾರ್ಕ್ಸ್ ತೋರಿಸುತ್ತದೆ
- ಅದನ್ನು ನೋಡಿ, ಮಾರ್ಕ್ಸ್ ಶೀಟ್ ಡೌನ್ಲೋಡ್ ಮಾಡಿಕೊಳ್ಳಿ
- ಪಿಡಿಎಫ್ನಲ್ಲಿ ಡೌನ್ಲೋಡ್ ಆಗಲಿದೆ
- ಮುಂದಿನ ದಾಖಲೆಗಳಿಗಾಗಿ ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ
ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಕರ್ನಾಟಕದಾದ್ಯಂತ 2,818 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆಸಲಾಗಿತ್ತು. ಒಟ್ಟು ಸುಮಾರು 8.96 ಲಕ್ಷ ವಿದ್ಯಾರ್ಥಿಗಳು, 4,61,563 ಬಾಲಕರು ಮತ್ತು 4,34,884 ಬಾಲಕಿಯರು ಪರೀಕ್ಷೆ ಬರೆದಿದ್ದರು. ಸುಮಾರು 75 ಸಾವಿರಕ್ಕೂ ಹೆಚ್ಚು ಮೌಲ್ಯ ಮಾಪಕರು 6 ವಿಷಯಗಳಿಗೆ ಸೇರಿದ 60 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದಾರೆ. ಈಗಾಗಲೇ ಮೌಲ್ಯಮಾಪನ ಕಾರ್ಯ ಮುಗಿಸಿರುವ ಕರ್ನಾಟಕ ಪರೀಕ್ಷಾ ಮಂಡಳಿ ಇಂದು ಫಲಿತಾಂಶ ಪ್ರಕಟ ಮಾಡಿದೆ
ಇದನ್ನೂ ಓದಿ : ‘ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯ್ತು’ – ಸೋನು ನಿಗಮ್ ಮಾತಿಗೆ ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ!
