ರಸ್ತೆಯಲ್ಲಿ KSRTC ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ ಸಸ್ಪೆಂಡ್!

ಬೆಂಗಳೂರು : ಹಾವೇರಿಯಲ್ಲಿ ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ಚಾಲಕ ನಮಾಜ್ ಮಾಡಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೂಡ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಈ ಬೆನ್ನಲ್ಲೇ ಇದೀಗ ಕರ್ತವ್ಯ ಲೋಪ ಮಾಡಿದ ಚಾಲಕನನ್ನು ಸಸ್ಪೆಂಡ್ ಮಾಡಿ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ.

ಆದೇಶದಲ್ಲಿ ಏನಿದೆ? ಎ. ಆರ್. ಮುಲ್ಲಾ, ಚಾಲಕ ಬಿಲ್ಲೆ ಸಂಖ್ಯೆ : 300, ಹಾನಗಲ್ ಘಟಕ ಇವರು ಕ.ರಾ.ರ.ಸಾ.ಸಂಸ್ಥೆಯ ಶಿಸ್ತು ಮತ್ತು ನಡತೆಗಳ ನಿಯಮಾವಳಿ 1971ರ ಭಾಗ-2 ಖಂಡಿಕೆ 3 ರಲ್ಲಿನ ಉಪ ಕಂಡಿಕೆ 1 ರಲ್ಲಿನ (ಎ) (ಬಿ) ಮತ್ತು (ಸಿ) ರಲ್ಲಿನ ನಿರ್ದೇಶನಗಳನ್ನು ಉಲ್ಲಂಘಿಸಿರುವುದು ಮೇಲೆ ನಮೂದಿಸಿದ ವರದಿಯಿಂದ ತಿಳಿಯುತ್ತದೆ. ಮತ್ತು ಸದರಿಯವರು ಕೆಲಸದ ಮೇಲೆ ಇರುವುದರಿಂದ ಈ ಪ್ರಕರಣದ ತನಿಖೆಗೆ ಭಾದಕವಾಗಬಹುದೆಂದು, ಬಿಲ್ಲೆ ಸಂಖ್ಯೆ : 300, ಹಾನಗಲ್ ಘಟಕದ ಚಾಲಕ ಎ. ಆರ್. ಮುಲ್ಲಾ ಇವರನ್ನು ಅಮಾನತ್ತು ಮಾಡಲಾಗದೆ.

ಪ್ರಕರಣ : ಮಂಗಳವಾರ (ಏ.29) ರಂದು ಸಂಜೆ ಹುಬ್ಬಳ್ಳಿಯಿಂದ ಹಾವೇರಿಗೆ ಹೋಗುವ ಬಸ್​ನ ಚಾಲಕ-ಕಂ-ನಿರ್ವಾಹಕ ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ನಮಾಜ್ ಮಾಡಿದ್ದಾರೆ. ಚಾಲಕ-ಕಂ-ನಿರ್ವಾಹಕ ನಮಾಜ್​ ಮಾಡುತ್ತಿರುವುದನ್ನು ಪ್ರಯಾಣಿಕರೊಬ್ಬರು ಮೊಬೈಲ್​ ಕ್ಯಾಮೆರಾದಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದ್ದಂತೆ ನಮಾಜ್ ಮಾಡಿದ ಚಾಲಕನ​ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಚಾಲಕನ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹಿಸಿದ್ದರು.

ಇದನ್ನೂ ಓದಿ : ಕುಟುಂಬ ಸಮೇತ ರಾಯರ ದರ್ಶನ ಪಡೆದು, ಮೊಮ್ಮಗನ ಮದುವೆಗೆ ಮಂತ್ರಾಲಯ ಶ್ರೀಗಳನ್ನ ಆಹ್ವಾನಿಸಿದ ಬಿಎಸ್‌ವೈ!

Btv Kannada
Author: Btv Kannada

Read More