ಕುಟುಂಬ ಸಮೇತ ರಾಯರ ದರ್ಶನ ಪಡೆದು, ಮೊಮ್ಮಗನ ಮದುವೆಗೆ ಮಂತ್ರಾಲಯ ಶ್ರೀಗಳನ್ನ ಆಹ್ವಾನಿಸಿದ ಬಿಎಸ್‌ವೈ!

ರಾಯಚೂರು : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬ ಸಮೇತರಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದಿದ್ದಾರೆ.

ತಮ್ಮ ಮೊಮ್ಮಗ, ಸಂಸದ ಬಿವೈ ರಾಘವೇಂದ್ರ ಅವರ ಮಗನ ಮದುವೆ ಆಮಂತ್ರಣ ನೀಡಲು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಆಗಮಿಸಿದ್ದರು. ಈ ವೇಳೆ ರಾಯರ ವೃಂದಾವನ, ಮಂಚಾಲಮ್ಮ ದೇವಿಗೆ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರನ್ನು ಭೇಟಿಯಾಗಿ ಮೊಮ್ಮಗನ ಮದುವೆ ಆಹ್ವಾನಿಸಿದರು. ಈ ವೇಳೆ ಶ್ರೀಗಳು ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಇದನ್ನೂ ಓದಿ : ಡಿಕೆ ಸುರೇಶ್ ಪತ್ನಿ ಎಂದು ವಿಡಿಯೋ ಮಾಡಿದ್ದ ಕಿರಿಕ್​ ರಾಣಿ ಅರೆಸ್ಟ್ – ಟೀಚರ್​ ಪವಿತ್ರಾ ಹೇಳಿದ್ದು ನಿಜನಾ?

Btv Kannada
Author: Btv Kannada

Read More

Read More