ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಆ ಸಿನಿಮಾಗಳ ಸಾಲಿಗೆ ಈಗ ಹೊಸ ಸೇರ್ಪಡೆ ‘ನಾನ್ ಪೋಲಿ’ ಸಿನಿಮಾ. ಹೊಸ ತಂಡದ ಹೊಸ ಪ್ರಯತ್ನದ ಸಿನಿಮಾ ಇದಾಗಿದೆ.
‘ನಾನ್ ಪೋಲಿ’ ಸಿನಿಮಾ ಸ್ನೇಹ, ಪ್ರೀತಿ ಹಾಗೂ ತಾಯಿ ಸೆಂಟಿಮಂಟ್ ಸುತ್ತ ನಡೆಯುವ ಕಥಾಹಂದರ ಹೊಂದಿದೆ. ಯಶವಂತ್, ಹರೀಶ್, ನಾಯಕಿ ದಿಶಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ನಾಯಕ ಯಶವಂತ್ ಎಂ. ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದ ಮೇಕಿಂಗ್ ವಿಡಿಯೋ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ಸಿನಿಮಾದ ಮೇಕಿಂಗ್ ನೋಡ್ತಾಯಿದ್ರೆ ಸಿನಿಮಾ ಸಖತ್ ಪ್ರಾಮೀಸಿಂಗ್ ಆಗಿದೆ ಎಂಬ ಅಭಿಪ್ರಾಯ ಸಿನಿ ಪ್ರೀಯರು ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಆ್ಯಕ್ಷನ್ ಮೇಕಿಂಗ್ ಕೂಡ ಅದ್ಬುತವಾಗಿ ಮೂಡಿಬಂದಿದೆ.
ಅಂದಹಾಗೆ ಪಾರ್ವತಿ ಫಿಲ್ಮ್ಸ್ ಬ್ಯಾನರ್ನಲ್ಲಿ ಯಶವಂತ್ ಎಂ. ಸಿನಿಮಾಗೆ ಎಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳದೇ ಬಂಡವಾಳ ಹಾಕಿರೋದು ಮೇಕಿಂಗ್ನಿಂದ ಗೊತ್ತಾಗುತ್ತೆ. ಸೆನ್ಸರ್ ಮಂಡಳಿಯಿಂದ ಯಎ ಪ್ರಮಾಣ ಪತ್ರ ಪಡೆದಿರುವ ‘ನಾನ್ ಪೋಲಿ’ ಸಿನಿಮಾದ ಟ್ರೈಲರ್ನ್ನು ಕಳೆದ ತಿಂಗಳು ನಟ ಶ್ರೀಮುರಳಿ ಅವರು ಬಿಡುಗಡೆಗೊಳಿಸಿದ್ದರು.
ಆ ಬಳಿಕ ಚಿತ್ರದ ಟ್ರೈಲರ್ ವೀಕ್ಷಿಸಿದ ಶ್ರೀಮುರಳಿ ಅವರು ಬಹಳ ಇಂಟರೆಸ್ಟಿಂಗ್ ಆಗಿದೆ ಹಾಗೂ ಚಿತ್ರದ ಶೀರ್ಷಿಕೆ ಕೂಡ ವಿಭಿನ್ನವಾಗಿದೆ ಎಂದು ಚಿತ್ರ ತಂಡಕ್ಕೆ ಶುಭ ಕೋರಿದ್ದರು. ಇನ್ನು ಟ್ರೈಲರ್ ನೋಡಿದ ಸಿನಿಪ್ರೇಕ್ಷಕರು ಕೂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ZEE5 ಒಟಿಟಿಯಲ್ಲಿ ‘ಅಯ್ಯನ ಮನೆ’ ದಾಖಲೆ – 50 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ ವೀಕ್ಷಣೆ ಕಂಡ ಮಿನಿ ವೆಬ್ ಸರಣಿ!
