ಚೆನ್ನೈ : ಶ್ರೇಯಸ್ ಅಯ್ಯರ್ ಹಾಗೂ ಪ್ರಭಸಿಮ್ರನ್ ಸಿಡಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ವಿಕೆಟ್ಗಳ ರೋಚಕ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಚೆಪಾಕ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಸಿಎಸ್ಕೆ ನೀಡಿದ್ದ 191 ರನ್ಗಳ ಕಠಿಣ ಗುರಿಯನ್ನ ಪಂಜಾಬ್ ತಂಡ 19 ಓವರ್ಗಳಲ್ಲಿ ಗುರಿಯನ್ನು ತಲುಪಿ ಗೆಲುವಿನ ನಗೆ ಬೀರಿತು.
ಪಂಜಾಬ್ ಪರ ಪ್ರಭ್ಸಿಮ್ರನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕ ಇನ್ನಿಂಗ್ಸ್ ಆಡಿದರೆ, ಬೌಲಿಂಗ್ನಲ್ಲಿ ಮಿಂಚಿದ ಚಾಹಲ್ ಒಂದೇ ಓವರ್ನಲ್ಲಿ 4 ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಈ ಗೆಲುವಿನೊಂದಿಗೆ ಪಂಜಾಬ್ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಸಿಎಸ್ಕೆ ತಂಡ ಅಧಿಕೃತವಾಗಿ ಪ್ಲೇಆಫ್ ರೇಸ್‌ನಿಂದ ಹೊರಬಿತ್ತು. ಈ ಮೂಲಕ ಐಪಿಎಲ್ 2025 ಟೂರ್ನಿಯಿಂದಲೇ ಮೊದಲ ತಂಡವಾಗಿ CSK ಎಲಿಮಿನೇಟ್ ಆಗಿದೆ.
ಇದನ್ನೂ ಓದಿ : ಗುಡಿಬಂಡೆಯಲ್ಲಿ ಪುತ್ಥಳಿ ವಿವಾದ – ಒಕ್ಕಲಿಗರು & ಬಲಿಜ ಸಮುದಾಯದ ನಡುವೆ ಜಟಾಪಟಿ!
