ಬೆಂಗಳೂರು : ಬಿಬಿಎಂಪಿಯ ನೂತನ ಆಡಳಿತಾಧಿಕಾರಿಯಾಗಿ ತುಷಾರ್ ಗಿರಿನಾಥ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ನಿವೃತ್ತಗೊಂಡ ಉಮಾಶಂಕರ್ರಿಂದ ಅಧಿಕಾರ ಹಸ್ತಾಂತರಿಸಲಾಗಿದ್ದು, BBMP ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ನಡೆದಿದೆ.
ಬಿಬಿಎಂಪಿಯ ಆಡಳಿತಾಧಿಕಾರಿಯಾಗಿದ್ದ ಎಸ್.ಆರ್.ಉಮಾಶಂಕರ್ ಏ.30ಕ್ಕೆ ನಿವೃತ್ತಿಯಾಗುತ್ತಿದ್ದು, ಆ ಹುದ್ದೆಗೆ ತುಷಾರ್ ಗಿರಿನಾಥ್ ನೇಮಕ ಮಾಡಲಾಗಿದೆ. ಜತೆಗೆ ಬಿಬಿಎಂಪಿಯ ಆಡಳಿತಾಧಿಕಾರಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ತುಷಾರ್ ಗಿರಿನಾಥ್ ಅವರಿಗೆ ವಹಿಸಲಾಗಿದೆ. ತುಷಾರ್ ಗಿರಿನಾಥ್ ಕಳೆದ 3 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಈಗ ಬಿಬಿಎಂಪಿಯ ಆಡಳಿತಾಧಿಕಾರಿ ಹುದ್ದೆಯ ಹೆಚ್ಚುವರಿ ಕೆಲಸವನ್ನು ಇವರಿಗೆ ವಹಿಸಲಾಗಿದೆ.
ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತುಷಾರ್ ಗಿರಿನಾಥ್ ಅವರು ಪ್ರತಿಕ್ರಿಯಿಸಿ, 3 ವರ್ಷ ಬಿಬಿಎಂಪಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದೆ. ಇವತ್ತು ಮಹೇಶ್ವರ್ ರಾವ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದೇವೆ. ಯಾವುದೇ ಒಂದು ಹುದ್ದೆ ಬಿಡುವಾಗ ಸಾಕಷ್ಟು ಬಾರಿ ಇನ್ನು ಕೆಲಸ ಮಾಡಬೇಕಿತ್ತು ಅನಿಸುತ್ತೆ, ಮಾಡುವ ಸಾಕಷ್ಟು ಕೆಲಸ ಕೂಡ ಬಾಕಿ ಇರುತ್ತೆ. ಮಾಧ್ಯಮದಲ್ಲಿ ಟೀಕೆ ಟಿಪ್ಪಣಿ ನೀಡಿ ಪ್ರೋತ್ಸಾಹ ನೀಡಿದ್ದೀರ. ಟೀಕೆಗಳು ಬಂದಾಗ ನಾವು ಎಷ್ಟು ಕೆಲಸ ಮಾಡಿದ್ರು, ಟೀಕೆಗಳನ್ನ ಕೇಳಿಸಿಕೊಳ್ಳಬೇಕು ಅನಿಸುತ್ತೆ. ನಮ್ಮ ಅಧಿಕಾರಿ ವರ್ಗದವರು ಕೆಲಸ ಮಾಡುವುದು ಅನಿವಾರ್ಯವಾಗಿದೆ. ಮಹೇಶ್ವರ್ ರಾವ್ ಟೀಕೆ ಟಿಪ್ಪಣಿಗಳನ್ನ ತುಂಬಾ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ : BBMP ನೂತನ ಮುಖ್ಯ ಆಯುಕ್ತರಾಗಿ ಮಹೇಶ್ವರ ರಾವ್ ಅಧಿಕಾರ ಸ್ವೀಕಾರ!







