ಬೆಂಗಳೂರು : ದೇಶದಲ್ಲಿ ಮತ್ತು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಹಾಲು ಸೇರಿ ಹಲವು ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದೀಗ ಬ್ಯಾಂಕ್ಗಳು ಕೂಡ ತಮ್ಮ ನಿರ್ವಹಣಾ ವೆಚ್ಚ ಸರಿದೂಗಿಸುವ ಸಲುವಾಗಿ ಗ್ರಾಹಕರಿಗೆ ಮತ್ತೆ ಬರೆ ಎಳೆದಿದೆ.
ಬ್ಯಾಂಕ್ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಶಾಕ್ ನೀಡಿದೆ. ಮೇ 1 ರಿಂದ ಎಟಿಎಂ ಮೂಲಕ ಹಣ ತೆಗೆಯುವುದು ದುಬಾರಿಯಾಗಲಿದ್ದು, ಈ ಪರಿಷ್ಕೃತ ಎಟಿಎಂ ವಹಿವಾಟು ಶುಲ್ಕ ರಚನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಜಾರಿಗೆ ತಂದಿದೆ.
ಮೆಟ್ರೋ ಪ್ರದೇಶಗಳಲ್ಲಿನ ಗ್ರಾಹಕರು ತಿಂಗಳಿಗೆ ಮೂರು ಉಚಿತ ಎಟಿಎಂ ವಹಿವಾಟುಗಳನ್ನು ಪಡೆಯುತ್ತಾರೆ. ಆದರೆ ಮೆಟ್ರೋ ಅಲ್ಲದ ಪ್ರದೇಶಗಳಲ್ಲಿರುವವರು ಐದು ಉಚಿತ ಎಟಿಎಂ ವಹಿವಾಟುಗಳನ್ನು ಪಡೆಯುತ್ತಾರೆ. ಈ ಮಿತಿಗಳು ಎಟಿಎಂಗಳು ಮತ್ತು ನಗದು ಮರುಬಳಕೆ ಯಂತ್ರಗಳಲ್ಲಿ ಹಣಕಾಸು ಮತ್ತು ಹಣಕಾಸುಯೇತರ ವಹಿವಾಟುಗಳನ್ನು ಒಳಗೊಂಡಿರುತ್ತವೆ.
ಗ್ರಾಹಕರು ನಿಗದಿತ ಮಿತಿಗಿಂತ ಹೆಚ್ಚು ಬಾರಿ ಎಟಿಎಂಗಳಿಂದ ಹಣ ವಿತ್‌ಡ್ರಾ ಮಾಡಿದರೆ, ಪ್ರತಿ ವಹಿವಾಟಿಗೆ ಈಗಿರುವ 23 ರೂ. ಶುಲ್ಕ ವಿಧಿಸಬೇಕು.
ಇದನ್ನೂ ಓದಿ : ರಾಜ್ಯಾದ್ಯಂತ ಚಂಡಮಾರುತ ಪ್ರಸರಣ : ಮೇ. 6ರವರೆಗೆ ಭಾರೀ ಮಳೆ ಮುನ್ಸೂಚನೆ!
