ಬೆಂಗಳೂರು : ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿರಿಯ ಮುತ್ಸದ್ದಿ ನಾಯಕರಾಗಿದ್ದ ಎಸ್.ಎಂ.ಕೃಷ್ಣ ರವರು 1932ರ ಮೇ 1ರಂದು ಜನಿಸಿದ್ದು, ಅವರ 93ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅವರ ಅಭಿಮಾನಿಗಳು ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಪ್ರತಿವರ್ಷ ವಿವಿಧ ಕ್ಷೇತ್ರದ ಸಾಹಿತಿಗಳು, ಗಣ್ಯರು, ರೈತರು, ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲು ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿ ಅದನ್ನು ಕರ್ಮ ಭೂಮಿಯಾಗಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರದ ಹಲವು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿದ್ದ ಎಸ್.ಎಂ. ಕೃಷ್ಣ ರವರು ಒಬ್ಬ ಆದರ್ಶನೀಯ ಜನನಾಯಕರಾಗಿ ಬೆಳೆದವರು. ಬೆಂಗಳೂರನ್ನು ಐಟಿ ರಾಜಧಾನಿಯಾಗಿ ಮಾಡಿ ಪ್ರಪಂಚವನ್ನು ಬೆಂಗಳೂರು ಕಡೆಗೆ ತಿರುಗುವಂತೆ ಮಾಡಿ ಲಕ್ಷಾಂತರ ಉದ್ಯೋಗ ಸೃಷ್ಟಿಸಿ ರಾಜ್ಯದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಎಸ್.ಎಂ.ಕೃಷ್ಣರವರ ಜೀವನ ಯುವ ಪೀಳಿಗೆಗೆ ದಾರಿದೀಪ.
ತುಂಬು ಜೀವನ ನಡೆಸಿ ಕಳೆದ ಡಿಸೆಂಬರ್ನಲ್ಲಿ ಭೌತಿಕವಾಗಿ ಅಗಲಿದ ಎಸ್.ಎಂ. ಕೃಷ್ಣ ರವರ ಸಾಧನೆ ಮತ್ತು ಅವರ ಬದುಕನ್ನು ಸದಾ ಹಸಿರಾಗಿಡುವ ಸದುದ್ದೇಶದಿಂದ ಅವರ ಹೆಸರಿನಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಸೇರಿದಂತೆ ಹಲವು ಶಾಸಕರು ದಿವ್ಯ ಚೇತನ ಎಸ್.ಎಂ.ಕೃಷ್ಣ ದತ್ತಿನಿಧಿ ಸ್ಥಾಪಿಸಿ ಅದನ್ನು ಈ ಕೆಳಕಂಡ ವಿಶ್ವವಿದ್ಯಾನಿಲಯಗಳು ಮತ್ತು ಪ್ರತಿಷ್ಠಿತ ಸಂಸ್ಥೆಗಳು ಪ್ರತಿವರ್ಷ ದತ್ತಿನಿಧಿಯಿಂದ ಬರುವ ಹಣದಿಂದ ತಲಾ ಒಬ್ಬರಿಗೆ ಪ್ರಶಸ್ತಿ ಅಥವಾ ಉತ್ತಮ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ಎಸ್. ಎಂ. ಕೃಷ್ಣ ಅವರ ಹೆಸರಿನಲ್ಲಿ ನೀಡಲು ಕ್ರಮವಹಿಸಲಾಗಿದೆ.

ಮಂಡ್ಯ ಜಿಲ್ಲೆಯ ಸಚಿವರು, ಶಾಸಕರು ದಿವ್ಯ ಚೇತನ ಎಸ್. ಎಂ.ಕೃಷ್ಣರವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿರುವ ವಿವರ
- ಎನ್. ಚೆಲುವರಾಯ ಸ್ವಾಮಿ, ಸಚಿವರು, ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿಗಳು : ಗಾಂಧಿ ಕೃಷಿ ವಿಶ್ವ ವಿದ್ಯಾನಿಲಯ (ಜಿಕೆವಿಕೆ)ಬೆಂಗಳೂರು – ಪ್ರಗತಿಪರ ರೈತನಿಗೆ (ದತ್ತಿ ನಿಧಿ 5 ಲಕ್ಷ ರೂ.ಗಳು)
- ಎನ್. ಚೆಲುವರಾಯ ಸ್ವಾಮಿ, ಸಚಿವರು, ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿಗಳು : ಕರ್ನಾಟಕ ಸಂಘ, ಮಂಡ್ಯ ಸಮಾಜ ಸೇವೆಗಾಗಿ ಉತ್ತಮ ಪ್ರಶಸ್ತಿ (ದತ್ತಿ ನಿಧಿ 5 ಲಕ್ಷ ರೂ.ಗಳು)
- ಕೆ.ಎಂ.ಉದಯ್, ಶಾಸಕರು, ಮದ್ದೂರು ವಿಧಾನಸಭಾ ಕ್ಷೇತ್ರ : ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಪ್ರಥಮ gold medal ತೆಗೆದುಕೊಂಡ ಇಬ್ಬರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ. (ದತ್ತಿ ನಿಧಿ 10 ಲಕ್ಷ ರೂ.)
- ಪಿ.ಎಂ.ನರೇಂದ್ರ ಸ್ವಾಮಿ, ಶಾಸಕರು, ಅಧ್ಯಕ್ಷರು, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಮಳವಳ್ಳಿ ವಿಧಾನಸಭಾ ಕ್ಷೇತ್ರ : ಕಾನೂನು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗೆ ಚಿನ್ನದ ಪದಕ (ದತ್ತಿ ನಿಧಿ 5 ಲಕ್ಷ ರೂ.ಗಳು)
- ಎ. ಬಿ. ರಮೇಶ್ ಬಂಡಿಸಿದ್ದೇಗೌಡ, ಶಾಸಕರು, ಅಧ್ಯಕ್ಷರು, ಚಾಮುಂಡೇಶ್ವರಿ ವಿದ್ಯುತ್ ನಿಗಮ : ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಪ್ರತಿ ವರ್ಷ ಒಬ್ಬರು ಉತ್ತಮ ಚಿತ್ರಕಲಾವಿದರಿಗೆ ನಗದು ಮತ್ತು ಪ್ರಶಸ್ತಿ ಪತ್ರ (ದತ್ತಿ ನಿಧಿ 5 ಲಕ್ಷ ರೂ.ಗಳು)
- ರವಿಕುಮಾರ್ ಗಣಿಗ, ಶಾಸಕರು. ಮಂಡ್ಯ ವಿಧಾನಸಭಾ ಕ್ಷೇತ್ರ : ಮಂಡ್ಯ ವಿಶ್ವ ವಿದ್ಯಾನಿಲಯದಲ್ಲಿ gold medal ಪಡೆದ ವಿದ್ಯಾರ್ಥಿಗೆ ಚಿನ್ನದ ಪದಕ (ದತ್ತಿ ನಿಧಿ 5 ಲಕ್ಷ ರೂ.ಗಳು)
- ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಸಮಾಜ ಸೇವಕರು, ಲೋಕಸಭಾ ಅಭ್ಯರ್ಥಿ : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರತಿ ವರ್ಷ ಒಬ್ಬ ಸಾಹಿತಿಗೆ ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸುವುದು (ದತ್ತಿ ನಿಧಿ 5 ಲಕ್ಷ ರೂ.ಗಳು)
- ದಿನೇಶ್ ಗೂಳಿಗೌಡ, ಶಾಸಕರು, ಕರ್ನಾಟಕ ವಿಧಾನ ಪರಿಷತ್, ಮಂಡ್ಯ ಜಿಲ್ಲೆ : ರಾಮಕೃಷ್ಣ ಆಶ್ರಮ ಮೈಸೂರು. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗೆ ಪ್ರತಿ ವರ್ಷ ಪ್ರಥಮ ಸ್ಥಾನ ಪಡೆದವರಿಗೆ ಚಿನ್ನದ ಪದಕ.
ಎಸ್. ಎಂ. ಕೃಷ್ಣರವರ ಹೆಸರಿನಲ್ಲಿ ಪ್ರತಿ ವರ್ಷ ಒಬ್ಬ ಪ್ರಗತಿಪರ ರೈತನಿಗೆ, ಸಮಾಜಮುಖಿ ಸೇವೆ ಸಲ್ಲಿಸಿದ ಒಬ್ಬರಿಗೆ, ಮೈಸೂರು ವಿಶ್ವವಿದ್ಯಾನಿಲಯ, ಕಾನೂನು ವಿಶ್ವವಿದ್ಯಾನಿಲಯ, ಚಿತ್ರಕಲಾ ಪರಿಷತ್, ಮಂಡ್ಯ ವಿಶ್ವ ವಿದ್ಯಾನಿಲಯ, ಕನ್ನಡ ಸಾಹಿತ್ಯ ಪರಿಷತ್, ರಾಮಕೃಷ್ಣ ಆಶ್ರಮ ವತಿಯಿಂದ ಶ್ರೀಯುತರ ಹೆಸರಿನಲ್ಲಿ ಆಯಾ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಲು ಸಂಬಂಧ ಪಟ್ಟ ಸಂಸ್ಥೆಗಳಿಗೆ ಡಿಡಿ ಮುಖಾಂತರ ಠೇವಣಿಯನ್ನು ಕಳುಹಿಸಿಕೊಡಲಾಗಿದೆ.
ಇದನ್ನೂ ಓದಿ : ಸೆಟ್ಟೇರಿತು ಯುವ ನಟನೆಯ “ಎಕ್ಕ” ಸಿನಿಮಾ – ದೊಡ್ಮನೆ ಕುಡಿಗೆ ದುನಿಯಾ ವಿಜಯ್ ಪುತ್ರಿ ನಾಯಕಿ!







