ನವದೆಹಲಿ : ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ನೇಮಕ ಮಾಡಿ ಕೇಂದ್ರ ಕಾನೂನು ಸಚಿವಾಲಯ ಇಂದು ಅಧಿಸೂಚನೆ ಹೊರಡಿಸಿದೆ.
ಹಾಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಅವಧಿ ಪೂರ್ಣಗೊಂಡ ಬಳಿಕ ಮೇ 14ರಂದು ನ್ಯಾ. ಗವಾಯಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನ್ಯಾ. ಗವಾಯಿ ಅವರ ಹೆಸರನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಏ. 16ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ನ್ಯಾ. ಗವಾಯಿ ಅವರ ಅಧಿಕಾರವಧಿಯು ಆರು ತಿಂಗಳವರೆಗೆ ಇರಲಿದೆ. ಡಿ. 23ರಂದು ಅವರಿಗೆ 65 ವರ್ಷ ಪೂರ್ಣಗೊಳ್ಳಲಿದ್ದು, ಅಂದು ಅವರು ನಿವೃತ್ತರಾಗಲಿದ್ದಾರೆ.
ಇದನ್ನೂ ಓದಿ : ಆಸ್ತಿ ತೆರಿಗೆದಾರರಿಗೆ BBMPಯಿಂದ ಗುಡ್ ನ್ಯೂಸ್ – ಶೇ.5 ತೆರಿಗೆ ರಿಯಾಯಿತಿ ಅವಧಿ ವಿಸ್ತರಣೆ!

Author: Btv Kannada
Post Views: 232