ಬೆಂಗಳೂರು : ಸಕಲೇಶಪುರ ಕ್ಷೇತ್ರದಾದ್ಯಂತ ಕಾಡಾನೆ ದಾಳಿಯಿಂದ ಸಾವು ನೋವುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಈ ಕುರಿತು ಜನರು ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಇಂದು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಶಾಸಕ ಮಂಜು ಭೇಟಿ ಮಾಡಿದ್ದಾರೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆ ಕಾಡಾನೆಗಳ ಸ್ಥಳಾಂತರ, ಕಾಡಾನೆ ಮಾನವ ಸಂಘರ್ಷವನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಶಾಸಕ ಮಂಜು ಚರ್ಚಿಸಿದ್ದಾರೆ. ಇನ್ನು ಸ್ಥಳೀಯ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರೊಂದಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆಯನ್ನು ಆಯೋಜಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಶಾಸಕ ಮಂಜು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : DG-IGP ಅಲೋಕ್ ಮೋಹನ್ ಸೇವಾವಧಿ ವಿಸ್ತರಣೆ!

Author: Btv Kannada
Post Views: 166