ನವದೆಹಲಿ : ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ದಿಟ್ಟ ಹೆಜ್ಜೆಯ ಮೂಲಕ ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಉಗ್ರರರನ್ನು ಮಟ್ಟ ಹಾಕಲು ತೀರ್ಮಾನಿಸಿರೋ ಭಾರತೀಯ ಯೋಧರು ಆಕ್ರಮಣಾಕಾರಿ ಆಪರೇಷನ್‌ಗೆ ಇಳಿದಿದ್ದಾರೆ.
ಪಾಕಿಸ್ತಾನಕ್ಕೆ ಯುದ್ಧದ ಭೀತಿ ಕಾಡುತ್ತಿರುವ ಹೊತ್ತಲ್ಲೇ ಭಾರತ ನಿನ್ನೆ ಫ್ರಾನ್ಸ್ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತ ಫ್ರಾನ್ಸ್‌ನಿಂದ 26 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿ ಮಾಡುವ ಒಪ್ಪಂದ ಮಾಡಿಕೊಂಡಿದೆ.
ಈಗಾಗಲೇ ಭಾರತೀಯ ವಾಯುಪಡೆಯಲ್ಲಿ ರಫೇಲ್ ಫೈಟರ್ ಜೆಟ್‌ಗಳು ಇವೆ. ಅವುಗಳಲ್ಲಿ 2 ಸ್ಕ್ವಾಡ್ರನ್ ರಫೇಲ್ ಫೈಟರ್ ಜೆಟ್‌ಗಳು ಪಾಕ್ ಮತ್ತು ಚೀನಾ ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ.
ಇದೀಗ ಫ್ರಾನ್ಸ್‌ನಿಂದ ಭಾರತ 63 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 26 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿ ಮಾಡಲಾಗುತ್ತಿದೆ. 4.5 ಜನರೇಷನ್‌ನ ಈ ರಫೇಲ್ ಫೈಟರ್ ಜೆಟ್‌ಗಳು ವಾಯುಪಡೆಗೆ ಸೇರ್ಪಡೆಯಾಗುತ್ತಿರೋದು ಭಾರತೀಯ ಸೇನೆಗೆ ಹೆಚ್ಚಿನ ಬಲ ತರಲಿದೆ. ಪಾಕಿಸ್ತಾನದ F-16 ಫೈಟರ್ ಜೆಟ್‌ಗೆ ರಫೇಲ್ ಫೈಟರ್ ಜೆಟ್‌ಗಳು ಫೈಟ್ ನೀಡಲಿವೆ.
ಇದನ್ನೂ ಓದಿ : 35 ಎಸೆತದಲ್ಲಿ ಸೆಂಚುರಿ ಸಿಡಿಸಿದ 14ರ ಪೋರ.. ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆಟಕ್ಕೆ ಸಲಾಂ ಹೊಡೆದ ಕ್ರಿಕೆಟ್ ಜಗತ್ತು!
