ದೆಹಲಿ : ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ತಾಣವಾದ ಯೂಟ್ಯೂಬ್‌ನ ಭಾರತ ವಲಯದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಗುಂಜನ್ ಸೋನಿ ನೇಮಕವಾಗಿದ್ದಾರೆ. ಗುಂಜನ್ ಸೋನಿ ಅವರು ಈ ಮೊದಲು ಸಿಂಗಪುರ ಮೂಲದ ಇ-ಕಾಮರ್ಸ್ ತಾಣವಾದ ZALORAದ ಸಿಇಒ ಆಗಿದ್ದರು. ಅಲ್ಲದೇ ಮಿಂತ್ರಾ, ಸ್ಟಾರ್ ಇಂಡಿಯಾದ ಉನ್ನತ ಹುದ್ದೆಗಳಲ್ಲೂ ಕೆಲಸ ಮಾಡಿದ್ದರು.

ಸೋನಿ ಅವರು ಡಿಜಿಟಲ್ ಮಾರ್ಕೆಟಿಂಗ್, ಮೀಡಿಯಾ ಮಾರ್ಕೆಟಿಂಗ್ ಸೇರಿದಂತೆ ಇ-ಕಾಮರ್ಸ್ ವ್ಯವಹಾರದಲ್ಲಿ ಪರಿಣಿತರಾಗಿದ್ದಾರೆ. ತಮ್ಮ ನೇಮಕಕ್ಕೆ ಹರ್ಷ ವ್ಯಕ್ತಪಡಿಸಿರುವ ಗುಂಜನ್ ಸೋನಿ ಅವರು, ಭಾರತದಲ್ಲಿ ಯೂಟ್ಯೂಬ್, ಕಂಟೆಂಟ್ ಕ್ರಿಯೇಟರ್‌ಗಳ ಮತ್ತು ಸಮುದಾಯಗಳ ನಡುವೆ ದೊಡ್ಡ ಕ್ರಾಂತಿಯನ್ನೇ ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಮ್ಮ ಮೆಟ್ರೋದಲ್ಲಿ ತಿಂಡಿ ತಿಂದ ಯುವತಿ – ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ 500ರೂ. ದಂಡ!
Author: Btv Kannada
Post Views: 350







