ಕನ್ನಡ ಕಿರುತೆರೆ ನಟಿ, ಬಿಗ್ಬಾಸ್ ಸೀಸನ್ 10ರ ಮಾಜಿ ಸ್ಪರ್ಧಿ ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ಪೋಟೋ, ವಿಡಿಯೋಗಳನ್ನು ಶೇರ್ ಮಾಡ್ತಿರುತ್ತಾರೆ. ಇದೀಗ ನಮ್ರತಾ ಗೌಡ ಕೆಂಪು ಬಣ್ಣದ ಸೀರೆಯುಟ್ಟು ಬೆಂಗಾಲಿ ಬೆಡಗಿಯಂತೆ ಮಿಂಚಿದ್ದಾರೆ.

ಕೆಂಪು ಬಣ್ಣದ ಫ್ಯಾನ್ಸಿ ಸೀರೆಗೆ ವೆಲ್ವೆಟ್ ಬಣ್ಣದ ಡಿಸೈನರ್ ಬ್ಲೌಸ್ ಧರಿಸಿದ್ದಾರೆ. ಎರಡೂ ಕೈಗೆ ಚಿನ್ನದ ಬಳೆ ಹಾಗೂ ಬೆಂಗಾಲಿ ಶೈಲಿಯ ಕೆಂಪು ಬಣ್ಣದ ಬಳೆ ಧರಿಸಿದ್ದಾರೆ. ನಮ್ರತಾ ನೋಡಲು ಸಖತ್ ಬ್ಯೂಟಿಫುಲ್ ಆಗಿ ಕಾಣಿಸುತ್ತಿರುವ ಕಾರಣ ಮದುವೆ ಪ್ರಪೋಸಲ್ ಸೆಂಡ್ ಮಾಡೋಕೆ ನಾನು ರೆಡಿ ಎಂದು ಹುಡುಗರು ಕಾಲೆಳೆಯುತ್ತಿದ್ದಾರೆ.

ನಮ್ರತಾ ಗೌಡ ಅವರನ್ನು ಸವಿತಾ ರೆಡ್ಡಿ ಈ ರೀತಿ ಸ್ಟೈಲಿಂಗ್ ಮಾಡಿ, ರಕ್ಷಿತಾ ಮೇಕಪ್ ಮಾಡಿದ್ದಾರೆ. ಟೀಂ ಏಎಮ್ ಸ್ಟುಡಿಯೋ ಈ ಸುಂದರ ಫೋಟೋಗಳನ್ನು ಕ್ಲಿಕ್ ಮಾಡಿದೆ.

ಪುಟ್ಟ ಗೌರಿ ಮದುವೆ ಮತ್ತು ನಾಗಿಣಿ ಸೀರಿಯಲ್‌ನಲ್ಲಿ ನಟಿಸಿದ್ದ ನಮ್ರತಾ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಮೇಲೆ ಸಿಕ್ಕಾಪಟ್ಟೆ ಫೇಮಸ್ ಆದರು.
ಇದನ್ನೂ ಓದಿ : ಮಾಜಿ ಪತಿ 2ನೇ ಮದುವೆ ಬಗ್ಗೆ ನಟಿ ಸಮಂತಾ ಶಾಕಿಂಗ್ ರಿಯಾಕ್ಷನ್!
