ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್, ಕಿರುಕುಳ – ಮೊಬೈಲ್​ನಲ್ಲಿ ಪತ್ತೆಯಾಯ್ತು ನೂರಾರು ಸರಸ ಸಲ್ಲಾಪದ ವಿಡಿಯೋ.. ಮಂಗಳೂರಲ್ಲಿ ವಾಲಿಬಾಲ್ ಆಟಗಾರ ಅರೆಸ್ಟ್​!

ಮಂಗಳೂರು : ಬೆಳ್ತಂಗಡಿ ತಾಲೂಕಿನ ಖಾಸಗಿ ಕಾಲೇಜಿನ ವಿದ್ಯಾರ್ಥಿ, ವಾಲಿಬಾಲ್ ಆಟಗಾರ ಸೈಯದ್(24)​​ ಎಂಬಾತನ ಕಾಮಕಾಂಡ ಬಯಲಾಗಿದೆ. ವಿದ್ಯಾರ್ಥಿನಿಗೆ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ನೀಡಿದ ಹಿನ್ನಲೆ ಹಿಂದೂ ಸಂಘಟನೆ ಕಾರ್ಯಕರ್ತರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಸೈಯದ್ ಮೊಬೈಲ್ ಕಿತ್ತುಕೊಂಡು ನೋಡಿದಾಗ ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋಗಳು ಪತ್ತೆಯಾಗಿವೆ. ಸದ್ಯ ಬೆಳ್ತಂಗಡಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಸೈಯದ್​​ನನ್ನು ಬಂಧಿಸಿದ್ದಾರೆ.

ಸೈಯದ್​ ಮೂಲತಃ ಕಾರ್ಕಳ ನಿವಾಸಿಯಾಗಿದ್ದು, ಬೆಳ್ತಂಗಡಿ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ. ಸೈಯದ್ ವಾಲಿಬಾಲ್ ಆಟಗಾರನಾಗಿ ಗುರುತಿಸಿಕೊಂಡಿದ್ದ. ಈತನ ಮೇಲೆ ಓರ್ವ ವಿದ್ಯಾರ್ಥಿನಿಗೆ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಆತನನ್ನು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು ಈ ಘಟನೆ ವೇಳೆ ಸೈಯದ್​​ ಮೊಬೈಲ್ ಕಿತ್ತುಕೊಂಡು ನೋಡಿದಾಗ ಹಿಂದೂ ಸಂಘಟನೆ ಕಾರ್ಯಕರ್ತರು ಒಂದು ಕ್ಷಣ ಶಾಕ್​ ಆಗಿದ್ದಾರೆ. ಏಕೆಂದರೆ ಆತನ ಮೊಬೈಲ್​ ತುಂಬಾ ನೂರಾರು ಹುಡುಗಿಯರ ಜೊತೆಗಿನ ಸರಸ-ಸಲ್ಲಾಪದ ವಿಡಿಯೋಗಳು ಇರುವುದು ಪತ್ತೆಯಾಗಿದೆ.

ಹಲ್ಲೆ ಮಾಡಿದವರ ವಿರುದ್ಧ ಸೈಯದ್​​ ಕೂಡ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಹೀಗಾಗಿ ಹಿಂದೂ ಸಂಘಟನೆ ಕಾರ್ಯಕರ್ತರಾದ ಉಜಿರೆಯ ಮನೋಜ್ ಮತ್ತು ಪ್ರಜ್ವಲ್ ಗೌಡ ಎಂಬುವವರ ವಿರುದ್ಧವೂ ಎಫ್​ಐಆರ್​ ದಾಖಲಾಗಿದೆ.

ಇದನ್ನೂ ಓದಿ : ಭಾರತದ ದಾಳಿ ಭೀತಿಗೆ ಬೆದರಿ ಬಿಲ ಸೇರಿದ ಪಾಕ್ ಆರ್ಮಿ ಚೀಫ್ – ಕುಟುಂಬ ಸಮೇತ ಪಾಕಿಸ್ತಾನ ಬಿಟ್ಟು ಓಡಿ ಹೋದ್ರಾ ಆಸೀಂ ಮುನೀರ್?

Btv Kannada
Author: Btv Kannada

Read More