MLA ವಿನಯ್ ಕುಲಕರ್ಣಿ ವಿಡಿಯೋ ಕಾಲ್‌ನಲ್ಲಿ ‘ಬಂಗಾರಿ’ ಐಶ್ವರ್ಯಾ – ಪಾರ್ಕ್,​ ಫ್ಲೈಟಲ್ಲಿ​​ ಜೊತೆಗಿರೋ ಫೋಟೋಸ್​ ವೈರಲ್!

ಬೆಂಗಳೂರು : ಗೋಲ್ಡ್ ವಂಚನೆ ಕೇಸ್‌ನಲ್ಲಿ ಬಂಧನದಲ್ಲಿರುವ ಐಶ್ವರ್ಯಾ ಗೌಡ ಅವರ ತನಿಖೆಯಲ್ಲಿ ಸದ್ಯ ಸ್ಫೋಟಕ ಸತ್ಯಗಳು ಬಯಲಾಗುತ್ತಿವೆ. ED (ಜಾರಿ ನಿರ್ದೇಶನಾಲಯ) ಐಶ್ವರ್ಯಾ ಗೌಡ ಅವರನ್ನ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ.

ಪ್ರಕರಣದ ತನಿಖೆ ಮುಂದುವರಿಯುತ್ತಿರುವಾಗಲೇ ಕಾಂಗ್ರೆಸ್ MLA ವಿನಯ್ ಕುಲಕರ್ಣಿ ಹಾಗೂ ಐಶ್ವರ್ಯಾ ಗೌಡ ಅವರ ಕೆಲವು ಫೋಟೋಗಳು ಇದೀಗ ವೈರಲ್ ಆಗಿವೆ. ಚಿನ್ನದ ಕೇಸ್‌ನಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆ ವಿನಯ್ ಕುಲಕರ್ಣಿ ಅವರು ‘ಯಾವುದೇ ವ್ಯಾವಹಾರಿಕ ಸಂಬಂಧ ಇಲ್ಲ, ಐಶ್ವರ್ಯಾ ಗೌಡ ನನಗೆ ಪರಿಚಯ ಅಷ್ಟೇ, ಬೇರೇನೂ ಇಲ್ಲ ಎಂದಿದ್ದರು.

ಶಾಸಕ ವಿನಯ್ ಕುಲಕರ್ಣಿ ಅವರ I ಹೇಳಿಕೆ ಬೆನ್ನಲ್ಲೇ ಕೋಟಿ, ಕೋಟಿ ವಂಚನೆಯ ಆರೋಪಿ ಐಶ್ವರ್ಯಾ ಜೊತೆಗೆ ಶಾಸಕರು ಆಪ್ತವಾಗಿರುವ ಫೋಟೋಗಳು ಲಭ್ಯವಾಗಿದೆ. ವಿನಯ್ ಕುಲಕರ್ಣಿ ವಿಡಿಯೋ ಕಾಲ್‌ನಲ್ಲಿ ಐಶ್ವರ್ಯಾ ಗೌಡ ಚಾಟ್ ಮಾಡುತ್ತಿರೋದು ಫೋಟೋಗಳಲ್ಲಿ ಕಾಣಿಸಿಕೊಂಡಿದೆ. ಐಶ್ವರ್ಯಾ ಗೌಡ ಜೊತೆ ವಿನಯ್​ ಕುಲಕರ್ಣಿ ಪಾರ್ಕಲ್ಲಿ, ಫ್ಲೈಟಲ್ಲಿ ಜೊತೆಗಿರೋ ಫೋಟೋಗಳು ವೈರಲ್ ಆಗಿದೆ.

ಈ ಮೂಲಕ MLA ವಿನಯ್ ಕುಲಕರ್ಣಿ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ED ಕೈಗೂ ಕುಲಕರ್ಣಿ ವ್ಯವಹಾರದ ಸಾಕ್ಷ್ಯಗಳು ಸಿಕ್ಕಿದ್ದು, ಯಾವುದೇ ಕ್ಷಣದಲ್ಲೂ MLA ವಿನಯ್ ಕುಲಕರ್ಣಿ ಅರೆಸ್ಟ್ ಆಗೋ ಸಾಧ್ಯತೆಯಿದೆ.

ಗೋಲ್ಡ್ ವಂಚನೆ ಕೇಸಲ್ಲಿ ಸದ್ಯ ಐಶ್ವರ್ಯಾ ಗೌಡ ಅವರನ್ನು ಬಂಧಿಸಿರುವ ED ವಿನಯ್ ಕುಲಕರ್ಣಿ ನಿವಾಸದಲ್ಲೂ ಪರಿಶೀಲನೆ ನಡೆಸಿತ್ತು. ಈ ನಡುವೆ ಐಶ್ವರ್ಯಾ-ವಿನಯ್ ಕುಲಕರ್ಣಿ ‘ಕ್ಲೋಸ್’ ಫೋಟೋಸ್ ವೈರಲ್​ ಆಗಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ.

ಇದನ್ನೂ ಓದಿ : ಪಹಲ್ಗಾಮ್‌ನಲ್ಲಿ ಹತ್ಯೆಯಾದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ – ಸರ್ಕಾರಿ ಉದ್ಯೋಗ ಘೋಷಣೆ!

 

Btv Kannada
Author: Btv Kannada

Read More