ರಸ್ತೆಯಲ್ಲಿ ಕಸ ಹಾಕಿದ್ದನ್ನು ಪ್ರಶ್ನಿಸಿದ ಪ್ರೊಫೆಸರ್​ ಮೇಲೆ ಹಲ್ಲೆ – ಮೂವರು ಕಿಡಿಗೇಡಿಗಳು ಅರೆಸ್ಟ್​!

ಬೆಂಗಳೂರು : ಚಲಿಸುತ್ತಿದ್ದ ಆಟೋ ರಿಕ್ಷಾದೊಳಗೆ ಕುಳಿತು ಕಸ ಎಸೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಪ್ರೊಫೆಸರ್ ಮೇಲೆ ಹಲ್ಲೆಗೈದಿದ್ದ ಮೂವರು ಕಿಡಿಗೇಡಿಗಳನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಭಾನುಪ್ರಸಾದ್(26), ಶರತ್(23), ಅಮೃತ್ ಕುಮಾರ್(24) ಬಂಧಿತರು.

ಪ್ರೊಫೆಸರ್ ಅರಬಿಂದ್ ಗುಪ್ತ ಅವರು, ಏಪ್ರಿಲ್ 21ರಂದು ಸಂಜೆ 6 ಗಂಟೆ ಸುಮಾರಿಗೆ ಕೆಎಸ್ ಲೇಔಟ್ ಪಿಸಿಎಸ್ ಪಾರ್ಕ್ ಬಳಿ ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಮೂವರು ಕಿಡಿಗೇಡಿಗಳು ಆಟೋದಿಂದ ಗ್ಲಾಸ್ ಚೂರುಗಳು ಸೇರಿದಂತೆ ಕಸವನ್ನ ಎಸೆಯುತ್ತಿದ್ದರು. ಇದನ್ನು ನೋಡಿದ ಪ್ರೊಫೆಸರ್ ಅರಬಿಂದ್. ಮೂವರನ್ನು ಪ್ರಶ್ನಿಸಿದ್ದರು. ಈ ವೇಳೆ ಮೂವರು ಕಿಡಿಗೇಡಿಗಳು ಅರಬಿಂದ್ ಮೇಲೆ ಹೆಲ್ಮೆಟ್ ಹಾಗೂ ಕೈಗಳಿಂದ ಹಲ್ಲೆ ಮಾಡಿದ್ದರು.

ಈ ಘಟನೆ ಬಗ್ಗೆ ಅರಬಿಂದ್ ಅವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು ಹಾಗೂ ಕ್ರಮಕ್ಕೆ ಆಗ್ರಹಿಸಿದ್ದರು. ಆ ಬಳಿಕ ಕೆಎಸ್ ಲೇಔಟ್ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಇದೀಗ ಪ್ರೊಫೆಸರ್ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು, ಮೂವರನ್ನ ಕಿಡಿಗೇಡಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ – ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್!

Btv Kannada
Author: Btv Kannada

Read More