ಇಂದು ಆರ್​ಸಿಬಿ-ಡೆಲ್ಲಿ ಹೈವೋಲ್ಟೇಜ್​ ಕದನ​.. ಸೇಡು ತೀರಿಸಿಕೊಳ್ಳುವ ತವಕದಲ್ಲಿ ಬೆಂಗಳೂರು ಬಾಯ್ಸ್!

ದೆಹಲಿ : ಐಪಿಎಲ್​ ಸೀಸನ್-18ರ 46ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ವಿರಾಟ್ ಕೊಹ್ಲಿ ತವರು ಮನೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಈ ಪಂದ್ಯಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇಂದಿನ ಪಂದ್ಯಕ್ಕೆ ಆರ್​ಸಿಬಿ ಬಲಿಷ್ಠ ಬಳಗವನ್ನು ಕಣಕ್ಕಿಳಿಸಲಿದೆ. ಏಕೆಂದರೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್​ 10ರಂದು ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಜೊತೆಗೆ ಆರ್​ಸಿಬಿ ಹೀನಾಯವಾಗಿ ಸೋತಿತ್ತು. ಆರ್​ಸಿಬಿಯ 163 ಟಾರ್ಗೆಟ್​ ಚೇಸ್​ ಮಾಡಿದ್ದ ಡೆಲ್ಲಿ 169 ರನ್​ ಗಳಿಸಿ, 6 ವಿಕೆಟ್​ಗಳ ಗೆಲುವು ಪಡೆದಿತ್ತು. ತವರಿನ ನೆಲದಲ್ಲಿ ಗೆಲ್ಲಬಹುದಾದ ಪಂದ್ಯ ಆರ್​ಸಿಬಿ ಕೈಚೆಲ್ಲಿತ್ತು. ಆದರೆ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಡಿದ್ದ ಕೆ.ಎಲ್​ ರಾಹುಲ್​ ಡೆಲ್ಲಿ​ ಪರ ಅದ್ಧೂರಿ ಸೆಲೆಬ್ರೆಷನ್ ಮಾಡಿದ್ದರು.

ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಘರ್ಜಿಸಿದ್ದ ಕನ್ನಡಿಗ ಕೆ.ಎಲ್​ ರಾಹುಲ್ ಸೋಲುವ ಮ್ಯಾಚ್​ ಅನ್ನು ಆರ್​ಸಿಬಿಯಿಂದ ಕಸಿದುಕೊಂಡಿದ್ದರು. ವಿಶೇಷ ಎಂದ್ರೆ ಗೆದ್ದ ತಕ್ಷಣ ಮೈದಾನದಲ್ಲೇ ಬ್ಯಾಟ್​ನಿಂದ ಒಂದು ವೃತ್ತ ಕೊರೆದು ಅದರ ನಡುವೆ ಬ್ಯಾಟ್​ನಿಂದ ಗುದ್ದಿ ಇದು ನನ್ನ ಹೋಮ್​​ ಗ್ರೌಂಡ್ ಎಂದು ಕಾಂತಾರ ಸಿನಿಮಾ ಸ್ಟೈಲ್​ನಲ್ಲಿ ಕೆ.ಎಲ್ ರಾಹುಲ್ ಸಂಭ್ರಮಿಸಿದ್ದರು.

ಹಾಗಾಗಿ ಇಂದು ನಡೆಯುವ RCB-DC ಪಂದ್ಯ ತುಂಬಾ ರೋಚಕತೆಯಿಂದ ಕೂಡಿರಲಿದೆ. ಡೆಲ್ಲಿ ವಿರುದ್ಧ ಆರ್​​ಸಿಬಿ ಸೋತಾಗ ಅಭಿಮಾನಿಗಳು ವಿರಾಟ್​ ಯಾವುದನ್ನು ಇಟ್ಟುಕೊಳ್ಳಲ್ಲ, ದೆಹಲಿಯಲ್ಲಿ ನಡೆಯೋ ಪಂದ್ಯದಲ್ಲಿ ವಾಪಸ್ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇದೀಗ ಆ ಸಮಯ ಬಂದಿದ್ದು, ಏನಾಗುತ್ತೆಂದು ಕಾದುನೋಡಬೇಕು.

ಇದನ್ನೂ ಓದಿ : ‘ಲೋಕಾ’ ಬಲೆಗೆ ಬಿದ್ದಿದ್ದ ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ಹೃದಯಾಘಾತದಿಂದ ಸಾವು!

Btv Kannada
Author: Btv Kannada

Read More