ನವದೆಹಲಿ : ಇರಾನ್‌ನ ಬೃಹತ್ ಬಂದರಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸ್ಫೋಟದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಇರಾನಿನ ಪ್ರಮುಖ ಬಂದರಿನಲ್ಲಿ ಹಲವಾರು ಕಂಟೇನರ್‌ಗಳು ಸ್ಫೋಟಗೊಂಡು ಭಾರಿ ಸ್ಫೋಟ ಮತ್ತು ಬೆಂಕಿ ಅವಘಡ ಸಂಭವಿಸಿದೆ. ಬಂದರಿನಲ್ಲಿ ನಿಲ್ಲಿಸಲಾಗಿದ್ದ ಹಲವು ಕಂಟೇನರ್‌ಗಳು ಏಕಕಾಲಕ್ಕೆ ಸ್ಫೋಟಗೊಂಡಿದ್ದರಿಂದ ದೊಡ್ಡ ಪ್ರಮಾಣದ ಬ್ಲಾಸ್ಟ್ ಹಾಗೂ ಬೆಂಕಿ ಉಂಟಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಂದರು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹೊಗೆ ಹೊರಬರುತ್ತಿರುವುದು ಕಂಡಿದೆ.
ಟರ್ಕಿಯ ರಾಜಧಾನಿ ಬೈರೂತ್ ನ ಬಂದರಿನಲ್ಲಿ 2019ರಲ್ಲಿ ಹೀಗೆಯೇ ಪ್ರಬಲವಾದ ಸ್ಫೋಟ ಸಂಭವಿಸಿತ್ತು. ಅದು ಭಯೋತ್ಪಾದನೆಯ ಕೃತ್ಯವಾಗಿರಲಿಲ್ಲ. ಹಡಗಿನಲ್ಲಿ ತರಲಾಗಿದ್ದ ಕಂಟೈನರ್ ಒಂದರಲ್ಲಿ ಬಂದಿದ್ದ ಪಾರ್ಸೆಲ್ ಒಂದು ಸ್ಫೋಟಗೊಂಡಿತ್ತು. ಆ ತೀವ್ರತೆಯಿಂದಾಗಿ 200 ಮಂದಿ ಸಾವಿಗೀಡಾಗಿದ್ದರು. ಕಿಲೋಮೀಟರ್ ಗಳವರೆಗೆ ಅದರ ತೀವ್ರತೆ ಆವರಿಸಿತ್ತು. ಅನೇಕ ಮನೆಗಳು ಹಾಗೂ ಧ್ವಂಸವಾಗಿದ್ದವು.
ಇದನ್ನೂ ಓದಿ : ಬಾತ್ ರೂಂ ಸೆಲ್ಫಿ ಶೇರ್ ಮಾಡಿ ಟ್ರೋಲಿಗರಿಗೆ ವಾರ್ನಿಂಗ್ ಕೊಟ್ಟ ನಿವೇದಿತಾ ಗೌಡ – ಫೋಟೋದಲ್ಲಿ ನಿವಿ ಜೊತೆ ಇರೋರು ಯಾರು?
Author: Btv Kannada
Post Views: 323







