ಬಾತ್ ರೂಂ ಸೆಲ್ಫಿ ಶೇರ್ ಮಾಡಿ ಟ್ರೋಲಿಗರಿಗೆ ವಾರ್ನಿಂಗ್ ಕೊಟ್ಟ ನಿವೇದಿತಾ ಗೌಡ – ಫೋಟೋದಲ್ಲಿ ನಿವಿ ಜೊತೆ ಇರೋರು ಯಾರು?

ಬಿಗ್ ಬಾಸ್ ಸೇರಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕವೇ ಫೇಮಸ್ ಆದ ನಿವೇದಿತಾ ಗೌಡ ಡಿವೋರ್ಸ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಬೋಲ್ಡ್ ಮತ್ತು ಆ್ಯಕ್ಟೀವ್ ಆಗಿದ್ದಾರೆ. ಇದೀಗ ಬಾತ್ ರೂಮ್ ಸೆಲ್ಫಿಗಳನ್ನು ಶೇರ್ ಮಾಡುವ ಮೂಲಕ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಿವಿ ಹೆಚ್ಚಾಗಿ ತಮ್ಮ ಬಾತ್ ರೂಮಿನಲ್ಲಿಯೇ ಫೋಟೊ ಅಥವಾ ರೀಲ್ಸ್ ಗಳನ್ನು ಮಾಡುತ್ತಾ, ಅದೇ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೆ ನಟಿ ಬಾತ್ ರೂಮ್ ಸೆಲ್ಫಿ ಹಂಚಿಕೊಂಡಿದ್ದಾರೆ.

ನಿವೇದಿತಾ ಗೌಡ ತಮ್ಮ ಈ ಒಂದು ಫೋಟೋ ಜೊತೆಗೆ ಒಂದು ಲೈನ್ ಬರೆದುಕೊಂಡಿದ್ದಾರೆ. ಅದರ ಕನ್ನಡ ಅರ್ಥ ಸಿಂಪಲ್ ಆಗಿದೆ. ನಾನು ಮತ್ತು ನನ್ನ ಬಾತ್‌ ರೂಮ್‌ ನಮ್ಮ ಪಾಡಿಗೆ ನಾವು ಇರುತ್ತೇವೆ. ಇದು ನಮ್ಮ ಕೆಲಸ ನೋಡಿ. ಆದರೆ, ನೀವು ನಿಮ್ಮ ಕೆಲಸ ನೋಡಿಕೊಳ್ಳಿ ಅನ್ನೋದನ್ನೆ ಇದು ಹೇಳುತ್ತವೆ. ಈ ಮಾತಿನ ಇಂಗ್ಲಿಷ್ ಸಾಲು ಈ ರೀತಿ ಇವೆ. Me and my bathroom selfies minding our own business. you should too.

ನಿವೇದಿತಾ ಗೌಡ, ಬ್ರೌನ್ ಕಲರ್ ಡ್ರೆಸ್ ಧರಿಸಿದ್ದು, ಆಕೆಯ ಗೆಳತಿ ಬ್ಲ್ಯಾಕ್ ಡ್ರೆಸ್ ಧರಿಸಿ, ಇಬ್ಬರು ಜೊತೆಯಾಗಿ ಮಿರರ್ ಮುಂದೆ ನಿಂತು ಫೋಟೊ ತೆಗೆದಿದ್ದಾರೆ, ಅಲ್ಲದೇ ಗೆಳತಿ ನಿವೇದಿತಾ ಗೌಡರನ್ನು ಹಲವು ಪೋಸ್​ಗಳಲ್ಲಿ ಕ್ಯಾಪ್ಚರ್ ಮಾಡಿದ್ದಾರೆ. ತಮ್ಮ ಮುದ್ದಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾ ಖಾತೆ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ನಿವೇದಿತಾ ಟ್ರೋಲಿಗರಿಗೆ ವಾರ್ನ್ ಮಾಡಿದ್ದಾರೆ.

ಇನ್ನು ಕಾಮೆಂಟ್ ಸೆಕ್ಷನ್ ಪೂರ್ತಿ ಎಂದಿನಂತೆ ಇಷ್ಟಪಡುವವರು ಪ್ರೀತಿ ತೋರಿಸಿದ್ದಾರೆ, ಟ್ರೋಲಿಗರು ಕೆಟ್ಟ ಮಾಡುವ ಮೂಲಕ ನಿವೇದಿತಾ ವಿರುದ್ಧ ಕಿಡಿ ಕಾರಿದ್ದಾರೆ. ಯಾರೆ ಏನೇ ಹೇಳಿದ್ರೂ ನಿವೇದಿತಾ ತಮಗೆ ಇಷ್ಟ ಬಂದಂತೆ ಫೋಟೊ ಶೇರ್ ಮಾಡೋದು ಮಾತ್ರ ಬಿಡಲ್ಲ.

ಇದನ್ನೂ ಓದಿ : ನಾಳೆ ಬೆಂಗಳೂರಿನ ವಿಜಯನಗರದಲ್ಲಿ ಶ್ರೀ ರಾಮ ನವಮಿ ಬೃಹತ್‌ ಶೋಭಾಯಾತ್ರೆ!

Btv Kannada
Author: Btv Kannada

Read More