ನಾಳೆ ಬೆಂಗಳೂರಿನ ವಿಜಯನಗರದಲ್ಲಿ ಶ್ರೀ ರಾಮ ನವಮಿ ಬೃಹತ್‌ ಶೋಭಾಯಾತ್ರೆ!

ಬೆಂಗಳೂರು : ವಿಶ್ವ ಹಿಂದೂ ಪರಿಷತ್ – ಬಜರಂಗದಳ ಹಾಗೂ ವಿಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ನೋಂ)ದ ವತಿಯಿಂದ ನಾಳೆ ಸಂಜೆ 4 ಗಂಟೆಗೆ ಶ್ರೀ ರಾಮ ನವಮಿ ಬೃಹತ್‌ ಶೋಭಾಯಾತ್ರೆ ನಡೆಯಲಿದೆ. ಸದ್ಯ ಶೋಭಾಯಾತ್ರೆಗೆ ಭರ್ಜರಿ ಸಿದ್ಧತೆ ನಡೆಸಲಾಗಿದೆ.

ನಾಳೆ ವಿಜಯನಗರ ಪೂರ್ತಿ ಕೇಸರಿಮಯವಾಗಲಿದ್ದು, ವಿಜಯನಗರದ 9ನೇ ಮುಖ್ಯರಸ್ತೆ ಬಳಿ ಬೃಹತ್‌ ಶೋಭಾಯಾತ್ರೆ ನಡೆಯಲಿದೆ. ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಿಜಯನಗರ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಯವರು ವಹಿಸಲಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ದಿಕ್ಕೂಚಿ ಭಾಷಣ ಮಾಡಲಿದ್ದಾರೆ.

ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಪಹಲ್ಗಾಮ್ ಮಾದರಿಯಲ್ಲಿ ಭಯೋತ್ಪಾದಕ ದಾಳಿ ವಿಜಯನಗರದಲ್ಲಿ ಸಂಭವಿಸಿದರೆ ನಮ್ಮ ಭವಿಷ್ಯ ಹೇಗಿರಬಹುದು. ಇದರ ಭದ್ರತೆಗಾಗಿ ಶ್ರೀ ರಾಮ ನವಮಿ ಶೋಭಾಯಾತ್ರೆಯಲ್ಲಿ ಒಟ್ಟಾಗಿ ಭಾಗವಹಿಸಬೇಕು.

ಇದನ್ನೂ ಓದಿ : ಐಶ್ವರ್ಯ ಗೌಡ ಮತ್ತು ಸಹಚರರ ಮನೆ ಮೇಲೆ ಇಡಿ ದಾಳಿ – ಗೋಲ್ಡ್ ವಂಚಕಿ 14 ದಿನ ಇಡಿ ಕಸ್ಟಡಿಗೆ!

Btv Kannada
Author: Btv Kannada

Read More