ಬೆಂಗಳೂರು : ಇತ್ತೀಚಿಗೆ ದಾಸರಹಳ್ಳಿ ಬಿಬಿಎಂಪಿ ವಲಯದಲ್ಲಿ ನಕಲಿ ಕಾಮಗಾರಿ ಹೆಸರಿನಲ್ಲಿ ನಡೆದಿರುವ 25 ಕೋಟಿ ಲೂಟಿ ಕರ್ಮಕಾಂಡವನ್ನು ದಾಸರಹಳ್ಳಿ ಮಾಜಿ MLA, ಹಾಲಿ ಕಾಂಗ್ರೆಸ್ ಮುಖಂಡ ಆರ್. ಮಂಜುನಾಥ್ ಅವರು ಬಯಲಿಗೆಳೆದಿದ್ದರು. ಈ ಕುರಿತು ಬಿಟಿವಿ ನಿರಂತರವಾಗಿ ವರದಿ ಮಾಡಿತ್ತು.
ಈ ಬೆನ್ನಲ್ಲೇ ಇದೀಗ ದಾಸರಹಳ್ಳಿಯ 25 ಕೋಟಿ ಹಗರಣ ತನಿಖೆ ನಡೆಸಲು ಅಭಿಯಂತರರಿಗೆ ಬಿಬಿಎಂಪಿ ವಲಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕೆಲಸವನ್ನೇ ಮಾಡದೆ ಬಿಲ್ ಪಡೆದಿದ್ದ ಖತರ್ನಾಕ್ ಕಾಂಟ್ರಾಕ್ಟರ್ಗಳಿಗೆ ಅರೆಸ್ಟ್ ಭೀತಿ ಶುರುವಾಗಿದ್ದು, ಅಭಿಜಿತ್, ತೇಜೇಗೌಡ, ನಾರಾಯಣ ಗೌಡ ಹಾಗೂ EE ಯದುಕೃಷ್ಣ ವಿರುದ್ಧ ಯಾವುದೇ ಕ್ಷಣದಲ್ಲಿ FIR ಆಗುವ ಸಾಧ್ಯತೆಯಿದೆ.
ರಾಜ್ಯ ಸರ್ಕಾರ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ದಾಸರಹಳ್ಳಿ ವಲಯದ ಈ ಹಳ್ಳಿಗಳ ಅಭಿವೃದ್ಧಿಗಾಗಿ 25 ಕೋಟಿ ವಿಶೇಷ ಅನುದಾನವನ್ನು ಎರಡು ವರ್ಷದ ಹಿಂದೆ ಮಂಜೂರು ಮಾಡಿತ್ತು. ಇದನ್ನು ವಿಶೇಷವಾಗಿ ಹೊಸದಾಗಿ ಸೇರ್ಪಡೆಯಾದ ಹಳ್ಳಿಗಳ ಮೂಲಸೌಕರ್ಯ ಅಂದರೆ ರಸ್ತೆ ಒಳಚರಂಡಿ ನಿರ್ಮಿಸಲು ಬಳಸಬೇಕಾಗುತ್ತದೆ. ಆದ್ರೆ, ಅಭಿಜಿತ್, ತೇಜೇಗೌಡ ನಾರಾಯಣ ಗೌಡ ಮತ್ತು ಇಂಜಿನಿಯರ್ ಯದುಕೃಷ್ಣ ಸೇರಿಕೊಂಡು ಈ ಹಣವನ್ನೇಲ್ಲಾ ಲೂಟಿ ಮಾಡಿದ್ದರು. ಬಿಬಿಎಂಪಿ ಮುಖ್ಯ ಆಯುಕ್ತರು ಅನುಮೋದನೆ ಮಾಡಿಕೊಡುವ ಮೊದಲೇ ವರ್ಕ್ ಆರ್ಡರ್ ಕೊಟ್ಟು, ಪಿಎಂಸಿ ಅನುಮೋದನೆ ಮೊದಲೇ ಮುಖ್ಯ ಕಂಟ್ರಾಕ್ಟರ್ಗೆ ವರ್ಕ ಆರ್ಡರ್ ಕೊಡಿಸಿದ್ದರು.

6 ಕೋಟಿ ಬಿಲ್ಗೆ ಸಹಿ ಹಾಕಿದ್ದ EE ಯದುಕೃಷ್ಣ, ರಸ್ತೆ-ಒಳಚರಂಡಿ ಕಾಮಗಾರಿಯಲ್ಲಿ ನಡೆದಿದ್ದ ವ್ಯಾಪಕ ಅಕ್ರಮ ನಡೆಸಿದ್ದಾರೆ ಎನ್ನಲಾಗಿದೆ. ಕೇವಲ 1 ತಿಂಗಳ ಅವಧಿಯಲ್ಲೇ ಕಾಮಗಾರಿ ಮುಗಿದಿದೆ ಎಂದು ರಿಪೋರ್ಟ್ ಕೊಟ್ಟಿದ್ದು, ಗುತ್ತಿಗೆದಾರರ ಲಾಬಿಗೆ ಮಣಿದು 10 ಕೋಟಿ ಬಿಲ್ ಸ್ಯಾಂಕ್ಷನ್ ಮಾಡಿದ್ದರು. ಕಿಕ್ ಬ್ಯಾಕ್ ಪಡೆದು ಬಿಲ್ ಪಾವತಿಸಿದ್ದ
ಅಧಿಕಾರಿಗಳು-ಗುತ್ತಿಗೆದಾರರ ಅಕ್ರಮವನ್ನು ಮಾಜಿ ಶಾಸಕ ಆರ್ ಮಂಜುನಾಥ್ ಬಯಲಿಗೆಳೆದಿದ್ದರು.
ಇದೀಗ ದಾಸರಹಳ್ಳಿ ಮಾಜಿ ಶಾಸಕ ಆರ್ ಮಂಜುನಾಥ್ ಹೋರಾಟ ಹಾಗೂ ಬಿಟಿವಿಯ ನಿರಂತರ ವರದಿಗೆ ಜಯ ಸಿಕ್ಕಿದೆ. ವಲಯ ಆಯುಕ್ತರು 25 ಕೋಟಿ ಅಕ್ರಮದ ಬಗ್ಗೆ ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಮುಖ್ಯ ಎಂಜಿನಿಯರ್ಗೆ ಆದೇಶ ನೀಡಿದ್ದಾರೆ. ತನಿಖೆ ಬೆನ್ನಲ್ಲೇ ತಪ್ಪಿತಸ್ಥ ಅಧಿಕಾರಿ, ಕಾಂಟ್ರಾಕ್ಟರ್ಗಳ ಮೇಲೆ FIR ದಾಖಲಾಗಲಿದ್ದು, ಯಾವುದೇ ಕ್ಷಣದಲ್ಲಿ ಲೂಟಿಕೋರರು ಅರೆಸ್ಟ್ ಆಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಎರಡೂ ಕುಟುಂಬಗಳಿಂದ ಒಪ್ಪಿಗೆ.. ಇನ್ನೆರಡು ತಿಂಗಳಲ್ಲಿ ನಿರ್ದೇಶಕ ರಾಜ್ ನಿಡಿಮೊರು ಜೊತೆ ಸಮಂತಾ ನಿಶ್ಚಿತಾರ್ಥ?
