ಶೋಕಾಚರಣೆ ಬಿಟ್ಟು ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಇನ್ಸ್​​​​ಪೆಕ್ಟರ್ ದಿನೇಶ್‌ ಕುಮಾರ್ ಯಾವುದೇ ಕ್ಷಣ ಸಸ್ಪೆಂಡ್?

ತುಮಕೂರು : ಉಗ್ರರ ದಾಳಿಗೆ ಇಡೀ ದೇಶವೇ ಶೋಕಾಚರಣೆಯಲ್ಲಿರುವಾಗ ಶೋಕಿ ಮಾಡೋಕ್ಕೆ ಹೋಗಿ ಜನರ ಆಕ್ರೋಶಕ್ಕೆ ತುತ್ತಾಗಿದ್ದ ತುಮಕೂರು ಇನ್ಸ್​​​​ಪೆಕ್ಟರ್ ದಿನೇಶ್‌ ಕುಮಾರ್ ಯಾವುದೇ ಕ್ಷಣ ಸಸ್ಪೆಂಡ್ ಆಗುವ ಸಾಧ್ಯತೆಯಿದೆ.

ಹೌದು.. ಕಾಶ್ಮೀರದ ಪಹಲ್ಗಾಮ್​ನಲ್ಲಿ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಕಳೆದ ಏ.22ರಂದು ನಡೆದ ಉಗ್ರರ ದಾಳಿಯಲ್ಲಿ 2 ಕನ್ನಡಿಗರು ಸೇರಿ 26 ಮಂದಿ ಬಲಿಯಾಗಿದ್ದರು.  ಈ ಘಟನೆಯಿಂದ ಇಡೀ ಭಾರತವೇ ಶೋಕಾಚರಣೆಯಲ್ಲಿತ್ತು. ಆದ್ರೆ ತುಮಕೂರಿನಲ್ಲಿ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಯಾವುದೇ ನೋವಿಲ್ಲದೆ ಎಲ್ಲವನ್ನು ಮರೆತು ತೆರದ ಜೀಪ್​ನಲ್ಲಿ ರ್ಯಾಲಿ ಮಾಡಿ ಶೋ ಕೊಟ್ಟಿದ್ದರು.

ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಇದೀಗ ಯಾವುದೇ ಕ್ಷಣದಲ್ಲಿ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಸಸ್ಪೆಂಡ್​ಗೆ ಸೆಂಟ್ರಲ್ ಐಜಿ ಅವರು ಸಹಿ ಹಾಕುವ ಸಾಧ್ಯತೆಯಿದೆ. ಈ ಕುರಿತು ಬಿಟಿವಿಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಪ್ರಕರಣದ ಹಿನ್ನೆಲೆ : ತುಮಕೂರು ಸಿಪಿಐ ಆಗಿದ್ದ ಬಿ.ಎಸ್.ದಿನೇಶ್ ಕುಮಾರ್ ಕಳೆದ ತಿಂಗಳ ಮಾರ್ಚ್ 24ರಂದು ತುಮಕೂರು ನಗರ ಪೊಲೀಸ್ ಠಾಣೆಯಿಂದ ಕುಶಾಲನಗರ ವೃತ್ತ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಈ ಹಿನ್ನೆಲೆ ತುಮಕೂರಿನ ನಾಗರೀಕರ ಹಿತರಕ್ಷಣಾ ಸಮಿತಿ ಹಾಗೂ ಪ್ರಗತಿ ಪರ ಕನ್ನಡ ಪರ ದಲಿತ ಪರ ಹೋರಾಟಗಾರರ ವೇದಿಕೆ ವತಿಯಿಂದ ನಗರದ ಟೌನ್ ಹಾಲ್ ಸರ್ಕಲ್​ನಲ್ಲಿ ಪಟಾಕಿ ಸಿಡಿಸಿ ದಿನೇಶ್​ಗೆ ಬೀಳ್ಕೊಡುಗೆ ಸಮಾರಂಭ ಮಾಡಲಾಗಿತ್ತು. ಈ ಹಿನ್ನೆಲೆ ಶೋಕಾಚರಣೆ ಬಿಟ್ಟು ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಇನ್ಸ್‌ಪೆಕ್ಟರ್ ದಿನೇಶ್‌ ಕುಮಾರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ : ಎರಡೂ ಕುಟುಂಬಗಳಿಂದ ಒಪ್ಪಿಗೆ.. ಇನ್ನೆರಡು ತಿಂಗಳಲ್ಲಿ ನಿರ್ದೇಶಕ ರಾಜ್‌ ನಿಡಿಮೊರು ಜೊತೆ ಸಮಂತಾ ನಿಶ್ಚಿತಾರ್ಥ?

Btv Kannada
Author: Btv Kannada

Read More