ಎರಡೂ ಕುಟುಂಬಗಳಿಂದ ಒಪ್ಪಿಗೆ.. ಇನ್ನೆರಡು ತಿಂಗಳಲ್ಲಿ ನಿರ್ದೇಶಕ ರಾಜ್‌ ನಿಡಿಮೊರು ಜೊತೆ ಸಮಂತಾ ನಿಶ್ಚಿತಾರ್ಥ?

ನಟ ನಾಗಚೈತನ್ಯ ಹಾಗೂ ಬಹುಭಾಷಾ ನಟಿ ಸಮಂತಾ ಇಬ್ಬರೂ ಕೂಡ ಹಲವು ವರ್ಷಗಳ ಕಾಲ ಪ್ರೀತಿಸಿ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ. ಅದೇನಾಯಿತೋ ಏನೋ, ಇದ್ದಕ್ಕಿದ್ದಂತೆ ಈ ಜೋಡಿ ವಿಚ್ಛೇದನ ಪಡೆದು ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದ್ದರು. ಹಾಲು ಜೇನಿನಂತಿದ್ದ ಈ ಜೋಡಿ ಡಿವೋರ್ಸ್‌ ಪಡೆದು ದೂರವಾಗುತ್ತಾರೆ ಎಂದು ಯಾರೂ ಸಹ ಊಹಿಸಿಯೂ ಇರಲಿಲ್ಲ. 2022ರಲ್ಲಿ ವಿಚ್ಛೇದನ ಪಡೆದ ಇವರು, ದೂರವಾಗಲು ಕಾರಣ ಏನು ಎಂಬುದನ್ನೂ ಈವರೆಗೂ ಎಲ್ಲಿಯೂ ಹೇಳಿಕೊಂಡಿಲ್ಲ.

ಸಮಂತಾ ವಿಚ್ಛೇದನ ಪಡೆದ ನಂತರ ನಾಗಚೈತನ್ಯ, ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಹಸೆಮಣೆ ಏರಿದ್ದರು. ನಾಗಚೈತನ್ಯ ಅವರ ಅಭಿಮಾನಿಗಳಿಗೆ ಈ ವಿಚಾರ ಖುಷಿಯನ್ನುಂಟು ಮಾಡಿತ್ತಾದರೂ, ನಟಿ ಸಮಂತಾ ಅಭಿಮಾನಿಗಳು ನಾಗಚೈತನ್ಯ ಅವರನ್ನು ಟೀಕಿಸಿದ್ದರು. ಆದರೆ, ಇದೀಗ ಹೊಸದೊಂದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಟಿ ಸಮಂತಾ ನಿರ್ದೇಶಕ ರಾಜ್‌ ನಿಡಿಮೊರು ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದು, ಶೀಘ್ರವೇ ಮದುವೆ ಕೂಡ ಆಗಲಿದ್ದಾರೆ ಎನ್ನುವ ಸುದ್ದಿ ಸದ್ಯ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ನಡುವೆ, ರಾಜ್‌ ನಿಡಿಮೊರು ಹಾಗೂ ಸಮಂತಾ ಜೊತೆ ಜೊತೆಯಾಗಿ ಹಲವು ಜಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೇವಸ್ಥಾನಕ್ಕೆ ಬೇಟಿ ಮಾಡಿ ಪೂಜೆ ಕೂಡ ಸಲ್ಲಿಸಿ ಇತ್ತೀಚೆಗೆ ಬಾರಿ ಸುದ್ದಿಯಲ್ಲಿದ್ದಾರೆ. ಸದ್ಯ ಈ ವಿಚಾರ ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿಗೆ ಪುಷ್ಠಿ ನೀಡಿದೆ. ಇದೀಗ ಹೊಸದಾಗಿ ಕೇಳಿ ಬರುತ್ತಿರುವ ಗುಸು ಗುಸು ಏನಪ್ಪಾ ಅಂದರೆ.. ನಟಿ ಸಮಂತಾ ಹಾಗೂ ರಾಜ್‌ ನಿಡಿಮೊರು ಮದುವೆಗೆ ಎರಡೂ ಕುಟುಂಬಗಳಿಂದ ಒಪ್ಪಿಗೆ ಸಿಕ್ಕಿದು., ಈ ಜೋಡಿ ಇನ್ನೆರಡು ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಾಲಿದ್ದಾರೆ ಎನ್ನಲಾಗಿದೆ.

ಹೌದು, ತೆಲುಗು ಮಾಧ್ಯಮಗಳಲ್ಲಿ ಕೇಳಿ ಬರುತ್ತಿರುವ ವರದಿಯ ಪ್ರಕಾರ, ನಟಿ ಸಮಂತಾ ಹಾಗೂ ನಿರ್ದೇಶಕ ರಾಜ್‌ ನಿಡಿಮೊರು, ಇನ್ನೆರಡು ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ. ಈ ನಡುವೆ ಈ ಜೋಡಿ ಹೆಚ್ಚಾಗಿ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವರಿಬ್ಬರ ಡೇಟಿಂಗ್‌ ವದಂತಿಗಳಿಗೆ ಮತ್ತಷ್ಟು ಪುಷ್ಠಿ ಹೆಚ್ಚಿಸುತ್ತಿದೆ. ಇನ್ನೂ, ಈ ಕುರಿತು ಈ ಜೋಡಿ ಪ್ರತಿಕ್ರಿಯಿಸದೆ ಉಳಿದಿದ್ದು, ಅಭಿಮಾನಿಗಳು ಇವರಿಬ್ಬರ ನಡುವೆ ಏನೋ ಇದೆ, ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ, ಇಲ್ಲಿಯವರೆಗೂ ನಟಿ ಸಮಂತಾ ವಿಚ್ಛೇದನ ನಂತರ ಒಂಟಿಯಾಗಿ ಇದ್ದು, ಎರಡನೇ ಮದುವೆ ಕುರಿತು ಎಲ್ಲಿಯೂ, ಏನನ್ನೂ ಹೇಳಿಕೊಂಡಿಲ್ಲ. ಇಲ್ಲಿಯವರೆಗೂ ಎರಡನೇ ಮದುವೆ ಆಗೊಲ್ಲ ಅಂತ ಕೂಡ ಹೇಳಿಲ್ಲ. ಆದರೆ, ಇದೀಗ ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ನಟಿ ಸಮಂತಾ ನಿರ್ದೇಶಕನ ಕೈ ಹಿಡಿಯೋದು ಪಕ್ಕಾ ಎನ್ನುತ್ತಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ : ರನ್ಯಾ ರಾವ್​​ಗೆ ಬಿಗ್ ಶಾಕ್ – ಜಾಮೀನು ಅರ್ಜಿ ವಜಾ.. ನಟಿಗೆ 1 ವರ್ಷ ಜೈಲೇ ಗತಿ!

Btv Kannada
Author: Btv Kannada

Read More