ಫ್ಯಾಕ್ಟರಿಯ ಮಹಿಳೆಯರ ಕಂಡ್ರೆ ‘ಜೀನಿ’ ಮಾಲೀಕನಿಗೆ ಪುಕ ಪುಕ – ರೇಪ್​ ಕೇಸ್‌ ದಾಖಲಾಗ್ತಿದ್ದಂತೆ ತುಮಕೂರಿನಿಂದಲೇ ದಿಲೀಪ್‌ ಜೂಟ್!

ಶಿರಾ : ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಯರಗುಂಟೆ ಗ್ರಾಮದಲ್ಲಿ ಇರುವ ಹೆಸರಾಂತ ಜೀನಿ ಕಂಪನಿ ಮಾಲೀಕ ದಿಲೀಪ್‌ ಕುಮಾರ್‌ ಅವರು ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕಳ್ಳಂಬೆಳ್ಳ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಜಾತಿ ನಿಂದನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ತಾಲೂಕಿನ ದೊಡ್ಡಗುಳ ಗ್ರಾಮದ ಯುವತಿಯೋರ್ವಳು ಕಳೆದ 10 ತಿಂಗಳಿನಿಂದ ಜೀನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಆರು ತಿಂಗಳಿಂದ ಜೀನಿ ಮಾಲಿಕ ದಿಲೀಪ್‌ ಕುಮಾರ್‌, ಈ ಯುವತಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದರು ಎಂದು ಸ್ವತಃ ಅವರೇ ಆರೋಪಿಸಿದ್ದಾರೆ.

”ನನಗೆ ಸಹಕರಿಸು, ನಿನ್ನನ್ನು ರಾಣಿ ತರ ನೋಡಿಕೊಳ್ಳುತ್ತೇನೆ” ಎಂದು ದಿಲೀಪ್‌ ಕುಮಾರ್‌ ಮಹಿಳೆಗೆ ಒತ್ತಾಯ ಮಾಡುತ್ತಿದ್ದರು. ಏಪ್ರಿಲ್‌ 19 ರಂದು ಮಹಿಳೆಯನ್ನು ಸ್ವಲ್ಪ ಕೆಲಸ ಇದೆ ಎಂದು ಜೀನಿ ಕಂಪನಿಯ ಶೆಡ್‌ಗೆ ಕರೆದುಕೊಂಡು ಹೋದ ತಕ್ಷಣ ಆಕೆಯ ಕೈಯನ್ನು ಹಿಡಿದು ಎಳೆದಾಡಿ ಅತ್ಯಾಚರಕ್ಕೆ ಪ್ರಯತ್ನಿಸಿ, ನನಗೆ ಸಹಕರಿಸು ನಿನ್ನನ್ನು ರಾಣಿ ರೀತಿ ನೋಡಿಕೊಳ್ಳುತ್ತೇನೆ ಎಂದು ಆಮಿಷ ಒಡ್ಡಿದ್ದಾನೆ. ನಂತರ ಯುವತಿಯು ಅಲ್ಲಿಂದ ತಪ್ಪಿಸಿಕೊಂಡು ಹೋಗಿ ತಮ್ಮ ಗಂಡನ ಜತೆಗೆ ಬಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.

ಲೈಂಗಿಕ ದೌರ್ಜನ್ಯ ಮಾಡಬೇಡಿ ನಾನು ಅಂತವಳಲ್ಲ ನಾನು ಪ್ರೀತಿಸಿ‌ ಮದುವೆಯಾಗಿದ್ದಿನಿ. ನನಗೆ ಮಗು ಇದೆ ಕುಟುಂಬ ಇದೆ ನನ್ನ‌ ಜೀವನ‌ ಹಾಳು ಮಾಡಬೇಡಿ ಎಂದು ಪರಿಪರಿಯಾಗಿ ಮಹಿಳೆ ಆತನ ಕಾಲಿಗೆ ಬಿದ್ರೂ ಬಿಡದೆ ಲೈಂಗಿಕ ಹಿಂಸೆ ಕೊಟ್ಟಿದ್ದಾನೆ. ಈ ವಿಷಯ ಬಾಯಿಬಿಟ್ರೆ ಇಡೀ ಕುಟುಂಬ ಮುಗಿಸ್ತೇನೆ ಅಂತ ದಿಲೀಪ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಇದೆ. ಸದ್ಯ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದಿಲೀಪ್ ವಿರುದ್ಧ FIR ಆಗಿದ್ದು, ದೂರು ದಾಖಲಾಗ್ತಿದ್ದಂತೆ ತುಮಕೂರಿನಿಂದಲೇ ದಿಲೀಪ್​​ ಕಾಲ್ಕಿತ್ತಿದ್ದಾನೆ.

ಇನ್ನೂ ಜೀನಿ ಮಾಲೀಕ ದಿಲೀಪ್​ ವಿರುದ್ಧ FIR ಆಗಿದ್ದು ದೂರು ಕೊಡೋಕ್ಕೆ ಸಾಲು ಸಾಲು ಮಹಿಳೆಯರು ರೆಡಿ ಇದ್ದಾರೆ. FIR ಆದ್ಮೇಲೆ ದಿಲೀಪ ಪರಾರಿಯಾಗೋಕ್ಕೆ ಹೆಲ್ಪ್ ಮಾಡಿದ್ರಾ ಪೊಲೀಸರು ಅನ್ನೋ ಅನುಮಾನ ಇದ್ದು ಕಳ್ಳಂಬೆಳ್ಳ ಠಾಣೆ ಪೊಲೀಸರೇ ಮೊದ್ಲು ಜೀನಿ ದಿಲೀಪ್​ನನ್ನು ಮುಲಾಜಿಲ್ದೆ ಅರೆಸ್ಟ್ ಮಾಡಿ ಜೈಲಿಗೆ ಕಳಿಸಿ. ಹಾಸನದ ಪೆನ್​ಡ್ರೈವ್ ಕೇಸ್ ರೀತಿ ಇಲ್ಲೂ ಸಾಲು ಸಾಲು ದೂರು ಬರುತ್ತೆ. ಜೀನಿಯಲ್ಲಿ ವರ್ಕ್ ಮಾಡ್ತಿದ್ದ 90% ಲೇಡಿಸ್ ದೂರು ಕೊಡೋಕ್ಕೆ ರೆಡಿ ಇದ್ದು ಮಹಿಳಾ ಆಯೋಗದವರೇ ತಕ್ಷಣ ಜೀನಿ ಕಂಪನಿ ಮೇಲೆ ರೇಡ್ ಮಾಡಿ. ಅತ್ಯಾಚಾರದ ಕಾಸ್ ಹಾಕಿ ಜೈಲಿಗೆ ಕಳಿಸಿ ಎಂದು ಬಿಟಿವಿ ಜೊತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಗೌರಿಬಿದನೂರು MLA ಪುಟ್ಟಸ್ವಾಮಿ ಗೌಡ ವಿರುದ್ಧ ಭುಗಿಲೆದ್ದ ಆಕ್ರೋಶ!

Btv Kannada
Author: Btv Kannada

Read More

Read More