ಚೆಪಾಕ್​ನಲ್ಲಿ SRHಗೆ ಭರ್ಜರಿ ಜಯ.. ಪ್ಲೇಆಫ್‌ ರೇಸ್‌ನಿಂದ CSK ಬಹುತೇಕ ಹೊರಕ್ಕೆ!

ಚೆನ್ನೈ : ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಮತ್ತೆ ಹೀನಾಯ ಸೋಲು ಕಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಬಹುತೇಕ ಈ ಆವೃತ್ತಿಯಲ್ಲಿ ಪ್ಲೇ ಆಫ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿದೆ. ಆದ್ರೆ ಸನ್‌ ರೈಸರ್ಸ್‌ ಹೈದರಾಬಾದ್‌ ಇದೇ ಮೊದಲ ಬಾರಿಗೆ ಸಿಎಸ್‌ಕೆ ವಿರುದ್ಧ ಚೆಪಾಕ್‌ ಮೈದಾನದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 19.5 ಓವರ್‌ಗಳಲ್ಲಿ 154 ರನ್‌ಗಳಿಗೆ ಆಲೌಟ್‌ ಆಯಿತು. 155 ರನ್‌ಗಳ ಸವಾಲಿನ ಮೊತ್ತ ಗುರಿ ಬೆನ್ನಟ್ಟಿದ ಸನ್‌ ರೈಸರ್ಸ್‌ ಹೈದರಾಬಾದ್‌‌ 18.4 ಓವರ್‌ಗಳಲ್ಲೇ ಗುರಿ ಪೂರೈಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಿಗಿದಿದೆ.

ಸಿಎಸ್‌ಕೆ ಪರ ದೇವಾಲ್‌ ಬ್ರೇವಿಸ್‌ ಸ್ಫೋಟಕ 42 ರನ್‌, ಆಯುಷ್‌ ಮಾತ್ರೆ 30 ರನ್‌, ಜಡೇಜಾ 21 ರನ್‌, ದೀಪಕ್‌ ಹೂಡ 22 ರನ್‌ ಹೊರತುಪಡಿಸಿದ್ರೆ ಉಳಿದವರು ಅಲ್ಪಮೊತ್ತಕ್ಕೆ ನೆಲಕಚ್ಚಿದರು. ಇನ್ನೂ 155 ರನ್‌ಗಳ ಗುರಿ ಬೆನ್ನಟ್ಟಿದ ಹೈದರಾಬಾದ್‌ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಬಳಿಕ ಇಶಾನ್‌ ಕಿಶನ್‌ ತಾಳ್ಮೆಯ ಆಟ, ಕೊನೆಯಲ್ಲಿ ಕಮಿಂಡು ಮೆಂಡೀಸ್‌, ನಿತೀಶ್‌ ರೆಡ್ಡಿ ಅವರ ಜವಾಬ್ದಾರಿಯುತ ಬ್ಯಾಟಿಂಗ್​ನಿಂದ ತಂಡಕ್ಕೆ ಗೆಲುವು ಒಲಿದು ಬಂದಿತು.

ಇದನ್ನೂ ಓದಿ : ಉಗ್ರರು ಅಟ್ಟಹಾಸ ಮೆರೆದಿದ್ದ ಪಹಲ್ಗಾಮ್‌ಗೆ ರಾಹುಲ್​ ಗಾಂಧಿ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕ!

Btv Kannada
Author: Btv Kannada

Read More