ಬೆಂಗಳೂರು : ಬೆಂಗಳೂರಿನ ರೋಡ್ ರೇಜ್ ಪ್ರಕರಣ ಈಗ ದೇಶಾದ್ಯಂತ ಟ್ರೆಂಡಿಂಗ್ ಸುದ್ದಿಯಾಗಿದೆ. ಭಾರತೀಯ ವಾಯುಪಡೆ ಅಧಿಕಾರಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮತ್ತು ಬೈಕ್ ಸವಾರ ಟೆಕ್ಕಿ ವಿಕಾಸ್ ಕುಮಾರ್ ಇಬ್ಬರೂ ತಮ್ಮ ತಮ್ಮ ಆರೋಪಗಳನ್ನು ಮಾಡಿಕೊಂಡಿದ್ದಾರೆ.
ಇದೀಗ ವಿಂಗ್ ಕಮಾಂಡರ್ ಶಿಲಾದಿತ್ಯಗೆ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ರಿಲೀಫ್ ಸಿಕ್ಕಿದೆ. ಶೀಲಾದಿತ್ಯ ಹಾಗೂ ಪತ್ನಿ ವಿರುದ್ಧ ಯಾವುದೇ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣವನ್ನು ಕಾನೂನು ರೀತಿಯಲ್ಲಿ ತನಿಖೆ ನಡೆಸಿ, ನ್ಯಾಯಾಲಯದ ಅನುಮತಿ ಇಲ್ಲದೆ ಚಾರ್ಜ್ಶೀಟ್ ಸಲ್ಲಿಸುವಂತಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದ ಗೌಡರ್ ಪೀಠ ಆದೇಶ ಹೊರಡಿಸಿದೆ. ವಿಂಗ್ ಕಮಾಂಡರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ : ಪಹಲ್ಗಾಮ್ ದಾಳಿಕೋರರ ವಿರುದ್ಧ ಪ್ರತೀಕಾರ ಶುರು – ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರ ಮನೆ ಧ್ವಂಸ!

Author: Btv Kannada
Post Views: 184