ಜಮ್ಮುಕಾಶ್ಮೀರ : ಪಹಲ್ಗಾಮ್ನಲ್ಲಿ 26 ಅಮಾಯಕರ ಜೀವ ತೆಗೆದ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇದೀಗ ಸಿಕ್ಕ ಮಾಹಿತಿ ಪ್ರಕಾರ, 26 ಪ್ರವಾಸಿಗರ ಬಲಿ ಪಡೆದ ಇಬ್ಬರು ಶಂಕಿತ ದಾಳಿಕೋರರ ಮನೆಗಳನ್ನು ಧ್ವಂಸಗೊಳಿಸಲಾಗಿದೆ.
ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿರುವ ಉಗ್ರನ ಮನೆಯನ್ನು ಭಾರತೀಯ ಸೇನೆ ಬ್ಲಾಸ್ಟ್ ಮಾಡಿದೆ. ಅಂದ್ಹಾಗೆ ಬ್ಲಾಸ್ಟ್ ಆಗಿರುವ ಮನೆಗಳು ಅದಿಲ್ ಮತ್ತು ಉಗ್ರ ಆಸೀಫ್ ಶೇಖ್ಗೆ ಸೇರಿದೆ. ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅದಿಲ್ ಮತ್ತು ಆಸೀಫ್ ಶೇಖ್ ಹೆಸರು ಕೇಳಿಬಂದಿದೆ. ಈ ಇಬ್ಬರು Lashkar-e-Taiba ಸಂಘಟನೆಯ ಉಗ್ರರಾಗಿದ್ದು, ಪಹಲ್ಗಾಮ್ ದಾಳಿ ಮಾಡಿದ ಉಗ್ರರ ಲಿಸ್ಟ್ನಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
ಪಹಲ್ಗಾಮ್ನಲ್ಲಿ ಉಗ್ರರ ಅಮಾನುಷ ದಾಳಿಗೆ ಭಾರತ ಪ್ರತ್ಯುತ್ತರ ನೀಡಬೇಕು ಎಂಬ ಆಗ್ರಹ ಜೋರಾಗಿದೆ. ಅಂತೆಯೇ ಸೇನೆ ತನ್ನ ಕಾರ್ಯಾಚರಣೆಗೆ ಇಳಿದಿದೆ. ಮತ್ತೊಂದು ಕಡೆ ಭಾರತ ಸರ್ಕಾರ ಕೂಡ ಕಠಿಣ ನಿಲುವು ತೆಗೆದುಕೊಂಡಿದೆ. ಉಗ್ರ ಪೋಷಕ ಪಾಕಿಸ್ತಾನಕ್ಕೆ ಪೆಟ್ಟು ನೀಡಿ ಬುದ್ಧಿ ಕಲಿಸಲು ಮುಂದಾಗಿದೆ.
ಇದನ್ನೂ ಓದಿ : ಕನಸಿನಲ್ಲೂ ಊಹಿಸದ ಪ್ರತೀಕಾರ.. ಪಹಲ್ಗಾಮ್ ದಾಳಿಕೋರರಿಗೆ ಪ್ರಧಾನಿ ಮೋದಿ 10 ಎಚ್ಚರಿಕೆ!
