ಕನಸಿನಲ್ಲೂ ಊಹಿಸದ ಪ್ರತೀಕಾರ.. ಪಹಲ್ಗಾಮ್‌ ದಾಳಿಕೋರರಿಗೆ ಪ್ರಧಾನಿ ಮೋದಿ 10 ಎಚ್ಚರಿಕೆ!

ನವದೆಹಲಿ : ಪಹಲ್ಗಾಮ್‌ನಲ್ಲಿ ಭಾರತೀಯರ ರಕ್ತಪಾತ ನಡೆಸಿ ಪಾಪಿ ಪಾಕಿಸ್ತಾನದ ಉಗ್ರರು ಓಡಿ ಹೋಗಿದ್ದಾರೆ. ಸದ್ಯ ಜಮ್ಮು-ಕಾಶ್ಮೀರದಲ್ಲಿ ಪಹಲ್ಗಾಮ್‌ ದಾಳಿಕೋರರಿಗಾಗಿ ಭಾರತೀಯ ಸೇನೆಯಿಂದ ಭಾರೀ ಹುಡುಕಾಟ ಶುರುವಾಗಿದೆ. ಕಾಶ್ಮೀರದಲ್ಲಿ ಉಗ್ರರ ಬೇಟೆ ಆರಂಭವಾಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ರಣಹೇಡಿಗಳ ಮೇಲೆ ಕಿಡಿಕಾರಿದ್ದಾರೆ. ಅಮಾಯಕರ ಜೀವ ತೆಗೆದ ಪಾಪಿ ಉಗ್ರರನ್ನು ಹಿಗ್ಗಾಮುಗ್ಗಾ ಅಟ್ಟಾಡಿಸಿಕೊಂಡು ಹೊಡೆದು ಹಾಕುವ ಪ್ರತಿಜ್ಞೆ ಕೂಡ ಮಾಡಿದ್ದಾರೆ.

ಬಿಹಾರದ ಮಧುಬನಿಯಲ್ಲಿ ನಿನ್ನೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮೋದಿ, ಉಗ್ರರಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಭಯೋತ್ಪಾದಕರು ಕನಸಿನಲ್ಲೂ ಊಹಿಸಲಾಗದಂತಹ ಶಿಕ್ಷೆ ಕೊಡುವುದಾಗಿ ಹೇಳಿದ್ದಾರೆ. ಮೃತರಿಗೆ ನ್ಯಾಯ ದೊರಕಿಸಿಕೊಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಇಡೀ ರಾಷ್ಟ್ರವು ಈ ಸಂಕಲ್ಪದಲ್ಲಿ ದೃಢವಾಗಿದೆ. ಮಾನವೀಯತೆಯನ್ನು ನಂಬುವ ಜನರು ನಮ್ಮೊಂದಿಗಿದ್ದಾರೆ. ನಮ್ಮ ಜೊತೆ ನಿಂತ ದೇಶ ಜನರಿಗೆ, ನಾಯಕರಿಗೆ ಮೋದಿ ಧನ್ಯವಾದ ಸಲ್ಲಿಸಿದ್ದಾರೆ.

ಮೋದಿ ಪ್ರತೀಕಾರದ ಪ್ರತಿಜ್ಞೆ 
1. ಉಗ್ರ ದಾಳಿಯ ಸಂಚು ನಡೆಸಿದವರನ್ನ ನಾವು ಬಿಡೋದಿಲ್ಲ
2. ಭಯೋತ್ಪಾದಕರ ಕಲ್ಪನೆಗಿಂತಲೂ ದೊಡ್ಡ ಶಿಕ್ಷೆಯನ್ನೇ ನೀಡ್ತೀವಿ
3. ಉಗ್ರರು ಕನಸಿನಲ್ಲಿಯೂ ಊಹಿಸಿರದಂತ ಪ್ರತೀಕಾರ ಇರುತ್ತೆ
4. ಭಯೋತ್ಪಾದಕರ ಅಳಿದುಳಿದ ಜಾಗವನ್ನ ನಾಶ ಪಡಿಸ್ತೀವಿ
5. ಉಗ್ರ ಕೃತ್ಯದ ಹಿಂದಿರೋರನ್ನ ಹುಡುಕಿ ಹುಡುಕಿ ಹೊಡೀತೀವಿ
6. ಕಾಶ್ಮೀರದಲ್ಲಿ ದುಷ್ಕೃತ್ಯ ಮೆರೆದವರ ಹುಟ್ಟಡಗಿಸುತ್ತೇವೆ
7. ಭಯೋತ್ಪಾದಕರ ಮೂಲವನ್ನೇ ಕಿತ್ತೆಸೆಯುತ್ತೇವೆಂದು ಎಚ್ಚರಿಕೆ
8. ಕಾಶ್ಮೀರದಲ್ಲಿನ ದಾಳಿಕೋರರನ್ನ ಮಣ್ಣಲ್ಲಿ ಹೂತು ಹಾಕುತ್ತೇವೆ
9. ಕಾಶ್ಮೀರದಲ್ಲಿ ನಡೆದ ದಾಳಿಗೆ ಭಾರತ ತಕ್ಕ ಉತ್ತರ ಕೊಡಲಿದೆ
10. ಭಾರತ ರಾಷ್ಟ್ರವನ್ನ ಹೆದರಿಸೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ

ಇದನ್ನೂ ಓದಿ : ನಾಳೆ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ – ರಾಜ್ಯ ಸರ್ಕಾರದಿಂದ ಇಂಧನ ಸಚಿವ ಕೆ.ಜೆ. ಜಾರ್ಜ್, ಐವಾನ್ ಡಿಸೋಜಾ ಭಾಗಿ!

Btv Kannada
Author: Btv Kannada

Read More